ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಕವ್ವ ದೇವಿಗೆ ಉಡಿ ತುಂಬುವ ಕಾರ್ಯಕ್ರಮ

Published 13 ಏಪ್ರಿಲ್ 2024, 14:04 IST
Last Updated 13 ಏಪ್ರಿಲ್ 2024, 14:04 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಇಲ್ಲಿನ ಲಕ್ಕವ್ವ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಶುಕ್ರವಾರ ಸಂಭ್ರಮ ಸಡಗರದಿಂದ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ನಗರದ ಮುಖಂಡರು ದೇವಸ್ಥಾನದ ಮುಂಭಾಗದಲ್ಲಿ ಸಾಮೂಹಿಕ ಮಂಗಳಾರತಿಯನ್ನು ನೆರವೇರಿಸಿದ ನಂತರ ಜನರು ದೇವಸ್ಥಾನಕ್ಕೆ ತೆರಳಿ ತೆಂಗಿನಕಾಯಿ ಒಡೆದು ಲಕ್ಕವ್ವ ದೇವಿಗೆ ಕುದಿಸಿದ ಹೂರಣದ ಕಡಬು, ಅನ್ನ, ಮೊಸರು ನೈವೇದ್ಯ ಸಲ್ಲಿಸಿದರು. ಎರಡು ಮಂಗಳವಾರ ಮತ್ತು ಮೂರು ಶುಕ್ರವಾರದಂದು ವಾರದ ಆಚರಣೆ ನಡೆಯುತ್ತದೆ.

ವಾರದ ಆಚರಣೆ ಸಂಪ್ರದಾಯ ಶತಮಾನಗಳಿಂದ ನಡೆದುಕೊಂಡು ಬಂದಿದೆ. ನಗರದ ಪುರುಷರು, ಮಹಿಳೆಯರು ಚಿಕ್ಕ ಮಕ್ಕಳು, ಹಿರಿಯರು ಎಲ್ಲ ಧರ್ಮ, ಜಾತಿಯವರು ಬಡವ ಮತ್ತು ಶ‍್ರೀಮಂತರು ಲಕ್ಕವ್ವ ದೇವಿಗೆ ಉಡಿ ತುಂಬುವ ಕಾರ್ಯದಲ್ಲಿ ಭಾಗವಹಿಸುತ್ತಾರೆ ಎಂದು ಮಹಾಂತಯ್ಯ ಹಿರೇಮಠ ವಿವರಿಸಿದರು.

ಶಾಂತವೀರಯ್ಯ ಹಿರೇಮಠ, ಸಿದ್ದು ಹಿರೇಮಠ, ಈಶ್ವರಯ್ಯ ಮಠಪತಿ, ಕಲ್ಲಯ್ಯ ಮಠಪತಿ, ಸಿದ್ದನಗೌಡ ಪಾಟೀಲ, ಶ್ರೀಶೈಲ ಧಬಾಡಿ, ಮಲ್ಲಿಕಾರ್ಜುನ ತುಂಗಳ, ಪ್ರಶಾಂತ ಕೊಳಕಿ, ದಾನಪ್ಪ ಹುಲಜತ್ತಿ, ಶ್ರೀಶೈಲ ಯಾದವಾಡ, ಬಸವರಾಜ ಗುಂಡಿ, ರಾಜುಗೌಡ ಪಾಟೀಲ, ಮಲ್ಲಿಕಾರ್ಜುನ ಬಾವಲತ್ತಿ, ಬಸವರಾಜ ಗಿಡದಾನಪ್ಪಗೋಳ, ರೇವಪ್ಪ ಗುಣಕಿ, ಮಂಗಳವಾರ, ಸೋಮವಾರ, ಗೌಡ ಮತ್ತು ರೈತ ದೈವ ಮಂಡಳಿಯ ಸದಸ್ಯರು ಮತ್ತು ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT