ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯ’

Published 5 ಜೂನ್ 2024, 15:11 IST
Last Updated 5 ಜೂನ್ 2024, 15:11 IST
ಅಕ್ಷರ ಗಾತ್ರ

ಮಹಾಲಿಂಗಪುರ: ‘ಗ್ರಾಮೀಣ ಭಾಗದ ಹಲವೆಡೆ ಇನ್ನೂ ಜೀವಂತವಾಗಿರುವ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ’ ಎಂದು ಹಿರಿಯ ವಕೀಲ ಅರ್ಜುನ ಜಿಡ್ಡಿಮನಿ ಹೇಳಿದರು.

ಸಮೀಪದ ಚಿಮ್ಮಡ ಗ್ರಾಮದ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡ ಬಾಲಕಾರ್ಮಿಕರ ರಕ್ಷಣಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದಿನ ಮಕ್ಕಳೇ ದೇಶದ ಆಸ್ತಿ, ಅವರನ್ನು ಸದೃಢ, ಸುಶಿಕ್ಷಿತರನ್ನಾಗಿ ಬೆಳೆಸಿದಲ್ಲಿ ಉತ್ತಮ ಪ್ರಜೆಗಳಾಗಲು ಸಾಧ್ಯ. ಉತ್ತಮ ಶಿಕ್ಷಣ ನೀಡದೆ ಬಾಲ ಕಾರ್ಮಿಕರನ್ನಾಗಿ ಮಾಡಿದಲ್ಲಿ ನಮ್ಮ ಪೂರ್ವಜರ ರೀತಿ ಜೀತಪದ್ಧತಿ, ಗುಲಾಮಗಿರಿಯ ಆಶ್ರಯದಲ್ಲಿ ಬದುಕಬೇಕಾಗುತ್ತದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ’ ಎಂದರು.

ಶಿಕ್ಷಣ ಸಂಯೋಜಕ ಬಿ.ಎಂ.ಹಳೆಮನಿ ಮಾತನಾಡಿ, ‘ಶಿಕ್ಷಣ ನೌಕರಿಗಾಗಿ ಅಷ್ಟೇ ಅಲ್ಲ, ಜೀವನ ನಿರ್ವಹಣೆಗಾಗಿಯೂ ಪಡೆಯಬೇಕಿದೆ. ಯಾವುದೇ ಕಾರ್ಯ ಶಿಕ್ಷಣದೊಂದಿಗೆ ಕೈಗೊಂಡಲ್ಲಿ ಅದು ಯಶಸ್ಸು ನೀಡುತ್ತದೆ’ ಎಂದರು.

ಅಭಿವೃದ್ಧಿ ಅಧಿಕಾರಿ ಶಿವಾನಂದ ಬಿರಾದಾರ, ಸದಾಶಿವ ಅರೆನಾಡ, ದ್ರಾಕ್ಷಾಯಿಣಿ ಮಂಡಿ ಮಾತನಾಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಾಲಾ ಮೋಟಗಿ ಅಧ್ಯಕ್ಷತೆ ವಹಿಸಿದ್ದರು. ಪ್ರೇಮಾ ಗೋವಿಂದಗೋಳ, ಬಿ.ಎಲ್.ಲಾಳಕೆ, ಮಹಾದೇವ ಗಾಯಕವಾಡ, ಭಾಸ್ಕರ ಬಡಿಗೇರ, ಪರಪ್ಪಾ ಪಾಲಭಾವಿ, ಅಶೋಕ ಧಡೂತಿ, ಮಹಾಲಿಂಗ ಮಾಯಣ್ಣವರ, ಮನೋಜ ಹಟ್ಟಿ, ನಾಗಪ್ಪಾ ಆಲಕನೂರ, ಬಾಳೇಶ ಬ್ಯಾಕೋಡ, ಬಾಳಪ್ಪಾ ಗಡೆಪ್ಪನವರ, ಅಶೋಕ ಮೋಟಗಿ, ಪ್ರಭು ಗೋವಿಂದಗೋಳ, ರವಿ ದೊಡವಾಡ, ಎಂ.ಎಸ್. ಜಿಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT