ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ: ಗುಳೆ ಹೋದ ಕೂಲಿಕಾರ್ಮಿಕರ ಮನೆಗೆ ಬೀಗ

ಕೂಲಿ ಕೆಲಸ ಕೊಡಲು ಕಾರ್ಮಿಕರ ಒತ್ತಾಯ
Published 2 ಮೇ 2024, 13:33 IST
Last Updated 2 ಮೇ 2024, 13:33 IST
ಅಕ್ಷರ ಗಾತ್ರ

ಬಾದಾಮಿ: ತಾಲ್ಲೂಕಿನ ಕೊನೆಯ ಸೀಮೆಯಲ್ಲಿನ ಬೆಟ್ಟದ ಮೇಲಿರುವ ಅನಂತಗಿರಿ ತಾಂಡೆಯಲ್ಲಿನ ಜನರು ದುಡಿಯಲು ಮನೆಗೆ ಬೀಗ ಹಾಕಿ ಗುಳೆ ಹೋಗಿದ್ದಾರೆ ಎಂದು ತಾಂಡೆ ಜನರು ಪತ್ರಿಕೆಗೆ ಹೇಳಿದರು.

‘ಇಲ್ಲಿ ಖಾತ್ರಿ ಯೋಜನೆಯಲ್ಲಿ ಸರಿಯಾಗಿ ಕೆಲಸ ಸಿಗದು. ಸಿಕ್ಕರೂ ಸರಿಯಾಗಿ ಸಂಬಳ ಆಗದು. ಮತ್ತು ಕಡಿಮೆ ಸಂಬಳದಿಂದ ಕುಟುಂಬ ನಿರ್ವಹಣೆಗೆ ತೊಂದರೆಯಾಗುವುದರಿಂದ ಜನರು ಬೇರೆ ಊರುಗಳಿಗೆ ದುಡಿಯಲು ಹೋಗುತ್ತಾರೆ. ತಾಂಡೆಯಲ್ಲಿ 20ಕ್ಕೂ ಅಧಿಕ ಕುಟುಂಬಗಳ ನೂರಾರು ಜನರು ಕೆಲಸವನ್ನು ಅರಸಿಕೊಂಡು ಮಂಗಳೂರು, ಉಡುಪಿ, ಗೋವಾ, ಶಿವಮೊಗ್ಗಾ ಮೊದಲಾದ ಕಡೆಗೆ ಗುಳೆ ಹೋಗಿದ್ದಾರೆ’ ಎಂದು ಹೇಳಿದರು.

‘ದುಡಿಯಲು ಹೋದ ಕೂಲಿ ಕಾರ್ಮಿಕರು ಮನೆಯಲ್ಲಿ ವಯಸ್ಸಾದ ಪೋಷಕರನ್ನು ಬಿಟ್ಟು ಹೋಗಿದ್ದಾರೆ. ನೆರೆಹೊರೆಯವರ ಸಹಾಯದಿಂದ ಬದುಕಬೇಕಿದೆ’ ಎಂದು ವೃದ್ಧೆ ಯಮನವ್ವ ಲಮಾಣಿ ಹೇಳಿದರು.

‘ಇಲ್ಲೇ ಹೆಚ್ಚಿಗೆ ಪಗಾರ ಕೊಟ್ಟು ದಿನಾ ಕೆಲಸ ಕೊಟ್ಟರ ಇಲ್ಲೇ ಊರಾಗ ಇರತಾರಿ. ತಿಂಗಳದಾಗ ವಾರ ಕೆಲಸ ಕೊಟ್ಟು ಮತ್ತ ಬಂದ್ ಮಾಡಿದರ ದುಡಿಯುವ ಜನ ಏನ ತಿನಬೇಕ್ರಿ. ಅದಕ್ಕ ಬ್ಯಾರೆ ಊರಿಗೆ ದುಡಿಯಾಕ ಹೋಗ್ಯಾರ’ ಎಂದು ಮೇಘಪ್ಪ ಲಮಾಣಿ ಹೇಳಿದರು.

‘ಅನಂತಗಿರಿ ತಾಂಡೆಯ ಕೂಲಿ ಕಾರ್ಮಿಕರಿಗೆ 2024ರ ಏಪ್ರಿಲ್‌ನಿಂದ ಇಲ್ಲಿವರೆಗೆ 374 ಜನರಿಗೆ 1570 ಮಾನನ ದಿನಗಳ ಕೆಲಸವನ್ನು ಕೊಡಲಾಗಿದೆ’ ಎಂದು ಪಿಡಿಒ ನಿರ್ಮಲಾ ಮೇಟಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT