ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಚನ ಸಾಹಿತ್ಯಕ್ಕೆ ದಾಸಿಮಯ್ಯರ ಕೊಡುಗೆ ಅಪಾರ

ದೇವರ ದಾಸಿಮಯ್ಯ ಜಯಂತಿ: ಬಸವರಾಜ ಸ್ವಾಮೀಜಿ ಹೇಳಿಕೆ
Published 13 ಏಪ್ರಿಲ್ 2024, 14:03 IST
Last Updated 13 ಏಪ್ರಿಲ್ 2024, 14:03 IST
ಅಕ್ಷರ ಗಾತ್ರ

ಗುಳೇದಗುಡ್ಡ: ಸಾಮಾಜಿಕ ನ್ಯಾಯ, ಸಮಾನತೆ, ಲಿಂಗಭೇದ, ಜಾತಿ, ಮತ, ಪಂಥಗಳ ಭಾವನೆಗಳನ್ನು ತೊರೆದು ನಾವೆಲ್ಲ ಒಂದು ಎನ್ನುವ ಸಂದೇಶ ಸಾರಿಗ ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯ ಅವರು ವಚನ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ ಎಂದು ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಜಗದ್ಗುರು ಗುರುಸಿದ್ದೇಶ್ವರ ಬ್ರಹ್ಮಮಠದಲ್ಲಿ ನೇಕಾರಸಂತ ಆದ್ಯವಚನಕಾರ ದೇವರ ದಾಸಿಮಯ್ಯನವರ ಜಯಂತ್ಯುತ್ಸವ ಸಮಾರಂಭದಲ್ಲಿ ಶನಿವಾರ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಮಾಜದಲ್ಲಿ ಏಕತೆ ತರುವ ನಿಟ್ಟಿನಲ್ಲಿ ದೇವರ ದಾಸಿಮಯ್ಯ ಸಾಕಷ್ಟು ಶ್ರಮಿಸಿದ್ದಾರೆ. ಸಮಾಜದಲ್ಲಿ ಎಲ್ಲರೂ ಒಂದು. ಕಾಯಕ ಸಮಾಜದಲ್ಲಿ ಬೇಧ ಭಾವ ಇರಬಾರದು. ಅಂದಾಗ ಮಾತ್ರ ಸಮಾಜದಲ್ಲಿ ಏಕತೆ ಸಾಧಿಸಲು ಸಾಧ್ಯ. ಶ್ರಮಿಕ ವರ್ಗದ ಮೇಲೆ ಇಡೀ ಸಮಾಜ ನಿಂತಿದೆ. ದುಡಿದು ಉಣ್ಣುವ ಸಮಾಜದ ಜನರನ್ನು ಕೀಳಾಗಿ ಕಾಣುತ್ತಿದ್ದಾರೆ. ಜಾತಿ, ಧರ್ಮ, ಮೇಲು ಕೀಳು, ಉಚ್ಛ ನೀಚ, ಎಂಬ ಕೀಳುಮಟ್ಟದ ಪರಿಕಲ್ಪನೆ ಬಾರದೆ, ನಾವೆಲ್ಲ ಒಂದು ಎನ್ನುವ ಭಾವ ಮುಂದಿನ ಮಕ್ಕಳಲ್ಲಿ ಬೆಳೆಸಬೇಕು ಎಂದರು.

ಜಗದ್ಗುರು ಗುರುಸಿದ್ದೇಶ್ವರ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ವಚನ ಕಂಠಪಾಠ, ಗಾಯನ ಮಾಡಿದರು.

ಕಾರ್ಯಕ್ರಮದಲ್ಲಿ ಗುರುಬಸವ ದೇವರು ಸಾನ್ನಿಧ್ಯ ವಹಿಸಿದ್ದರು. ಪಟ್ಟಸಾಲಿ ನೇಕಾರ ಸಮಾಜದ ಅಧ್ಯಕ್ಷ ಈರಣ್ಣ ಶೇಖಾ, ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ ಕಲಬುರ್ಗಿ, ನೇಕಾರ ಮುಖಂಡ ರಂಗಪ್ಪ ಶೇಬಿನಕಟ್ಟಿ, ಚಂದ್ರಶೇಖರ ಹೆಗಡೆ, ರವಿ ಅಲದಿ, ಗಿರಿಜಾ ಕಲ್ಯಾಣಿ, ಸಿ.ಬಿ.ಎಸ್.ಸಿ ಶಾಲೆಯ ಪ್ರಾಚಾರ್ಯ , ಉಪನ್ಯಾಸಕರಾದ ಸವಿತಾ ಚಂದನವರ್ ಭಾಗ್ಯ ಉದ್ನೂರು ದೀಪಾ ಉಂಕಿ, ದ್ರಾಕ್ಷಾಯಣಿ ಗೊಬ್ಬಿ, ನಾಗವೇಣಿ ತಿಪ್ಪಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT