ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಗೋಡು | 'ಕರ್ಕಶ ಧ್ವನಿ ಹೊಮ್ಮಿಸುವ ಆಟಿಕೆ ಮಾರುವಂತಿಲ್ಲ'

ಡಿವೈಎಸ್ಪಿ ಪ್ರಸಾದ್ ಗೋಖಲೆ ಎಚ್ಚರಿಕೆ
Published 25 ಮಾರ್ಚ್ 2024, 8:27 IST
Last Updated 25 ಮಾರ್ಚ್ 2024, 8:27 IST
ಅಕ್ಷರ ಗಾತ್ರ

ಕುರುಗೋಡು: ದೊಡ್ಡಬಸವೇಶ್ವರ ಮಹಾ ರಥೋತ್ಸವ ಸೋಮವಾರ ಜರುಗಲಿದ್ದು, ಪಟ್ಟಣದಲ್ಲಿ ಸಂಭ್ರಮ ಮನೆಮಾಡಿದೆ.

ಮಕ್ಕಳ ಆಟಿಕೆ ಸಾಮಾನುಗಳ ಅಂಗಡಿ, ಬಳೆ, ಕುಂಕುಮ, ಅರಿಶಿಣ, ಸಿಹಿ ಖಾದ್ಯ ಮಾರುವವರು ಅಂಗಡಿಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.

ರಥ ಸಾಗುವ ರಸ್ತೆಯ ಎರಡೂ ಬದಿಯಲ್ಲಿ ರಥೋತ್ಸವ ಸಂಪನ್ನಗೊಳ್ಳುವವರೆಗೆ ಯಾವುದೇ ಅಂಗಡಿಮುಂಗಟ್ಟುಗಳನ್ನು ಹಾಕಲು ಅವಕಾಶ ನೀಡಿಲ್ಲ. ರಥ ಸ್ವಸ್ಥಳ ತಲುಪಿದ ನಂತರ ಅಂಗಡಿಗಳನ್ನು ಹಾಕಿ ವ್ಯಾಪರ ವಹಿವಾಟು ನಡೆಸಲು ಪೊಲೀಸ್ ಇಲಾಖೆ ಅವಕಾಶ ನೀಡಿದೆ.

ಇಲಾಖೆ ಸೂಚಿಸಿದ ಸ್ಥಳದಲ್ಲಿ ಮಾತ್ರ ಜನರಿಗೆ ತೊಂದರೆಯಾಗದಂತೆ ವ್ಯಾಪಾರ ವಹಿವಾಟು ನಡೆಸಬೇಕು. ಕರ್ಕಶ ಧ್ವನಿ ಹೊರಹೊಮ್ಮಿಸಿ ಜನರಿಗೆ ತೊಂದರೆ ಉಂಟುಮಾಡುವ ಪೀಪಿಗಳನ್ನು ಮಾರಾಟ ಮಾಡುವಂತಿಲ್ಲ ನಿಯಮ ಮೀರಿ ಮಾರಾಟ ಮಾಡಿ ಜನರಿಗೆ ತೊಂದರೆ ಉಂಟು ಮಾಡಿದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಡಿವೈಎಸ್ಪಿ ಪ್ರಸಾದ್ ಗೋಖಲೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT