ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋರಣಗಲ್ಲು ಬಳಿ ಗುಡಿಸಿಲಿಗೆ ಆಕಸ್ಮಿಕ ಬೆಂಕಿ: ಹಾನಿ

Published 28 ಮಾರ್ಚ್ 2024, 15:35 IST
Last Updated 28 ಮಾರ್ಚ್ 2024, 15:35 IST
ಅಕ್ಷರ ಗಾತ್ರ

ತೋರಣಗಲ್ಲು: ಹೋಬಳಿಯ ಉಬ್ಬಲಗಂಡಿ ಗ್ರಾಮದ ಹೊರವಲಯದ ಜಮೀನಿನಲ್ಲಿರುವ ಗುಡಿಸಿಲಿಗೆ ಗುರುವಾರ ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಗುಡಿಸಿನಲ್ಲಿದ್ದ ಹಣ, ಶೇಂಗಾ, ಮೆಕ್ಕೆಜೋಳ, ದವಸ– ಧಾನ್ಯಗಳು ಸುಟ್ಟು ಕರಕಲಾಗಿವೆ.

ರೈತ ಹೊನ್ನುರಪ್ಪ ಅವರಿಗೆ ಸೇರಿದ ಗುಡಿಸಲಾಗಿದ್ದು, ಹೊನ್ನುರಪ್ಪ ಅವರು ಹಲವಾರು ವರ್ಷಗಳಿಂದ ತಮ್ಮ ಜಮೀನಿನಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ₹25 ಸಾವಿರ ಹಣ, ಶೇಂಗಾ ಚೀಲ 18, ಮೆಕ್ಕೆಜೋಳ ಚೀಲ 8, 2 ಕುರಿಗಳು ಸೇರಿದಂತೆ ಮನೆಯಲ್ಲಿನ ದವಸ–ಧಾನ್ಯಗಳು ಬೆಂಕಿಗೆ ಆಹುತಿಯಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

‘ಗುಡಿಸಿಲಿಗೆ ಆಕಸ್ಮಿಕವಾಗಿ ಬೆಂಕಿ ಬಿದಿದ್ದರಿಂದ ಗುಡಿಸಲಿನಲ್ಲಿದ್ದ ದವಸ–ಧಾನ್ಯಗಳು, ಇತರೆ ವಸ್ತುಗಳು ಸುಟ್ಟಿವೆ. ಈ ಘಟನೆಯ ಪ್ರಾಥಮಿಕ ವರದಿಯನ್ನು ಉನ್ನತ ಅಧಿಕಾರಿಗಳಿಗೆ ಕಳಿಸಲಾಗಿದ್ದು, ಪರಿಹಾರಕ್ಕಾಗಿ ಸೂಕ್ತ ಕ್ರಮವಹಿಸಲಾಗುವುದು’ ಎಂದು ತೋರಣಗಲ್ಲು ಹೋಬಳಿಯ ಕಂದಾಯ ನಿರೀಕ್ಷಕ ಗಣೇಶ್ ಪ್ರತಿಕ್ರಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT