ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರುಗುಪ್ಪ | ತಾಲ್ಲೂಕಿನಾದ್ಯಂತ ಶ್ರೀರಾಮನವಮಿ ಆಚರಣೆ

Published 17 ಏಪ್ರಿಲ್ 2024, 15:45 IST
Last Updated 17 ಏಪ್ರಿಲ್ 2024, 15:45 IST
ಅಕ್ಷರ ಗಾತ್ರ

ಸಿರುಗುಪ್ಪ: ತಾಲ್ಲೂಕಿನಾದ್ಯಂತ ಬುಧವಾರ ಶ್ರೀರಾಮ ನವಮಿಯ ಅಂಗವಾಗಿ ಭಕ್ತರು ಶ್ರೀರಾಮ ಮತ್ತು ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ತಳಿರು ತೋರಣ ಕಟ್ಟಿ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿ ಸಂಭ್ರಮದಿಂದ ಆಚರಿಸಿದರು.

ನಗರದ ಅಭಯಾಂಜನೇಯ, ಪ್ಯಾಟೆ ಆಂಜನೇಯ, ಅಲ್ಲಿಪುರ ಆಂಜನೇಯ ಸ್ವಾಮಿ ದೇವಸ್ಥಾನ ಮತ್ತು ತಾಲ್ಲೂಕಿನ ನೆಹರು ನಗರಕ್ಯಾಂಪ್, ಶ್ರೀನಗರಕ್ಯಾಂಪ್ ಮತ್ತು ನಂದಿಪುರ ಕ್ಯಾಂಪ್, ಮುದ್ದಟನೂರು ಕ್ಯಾಂಪ್, ಬೆಂಚಿಕ್ಯಾಂಪ್, ಬಂಡ್ರಾಳ್ ಕ್ಯಾಂಪ್ ಸೇರಿದಂತೆ ಸೀಮಾಂಧ್ರ ಪ್ರದೇಶದ ಜನರು ವಾಸಿಸುವ ಎಲ್ಲಾ ಕ್ಯಾಂಪ್‌ಗಳಲ್ಲಿ ಅಲ್ಲದೇ ವಿವಿಧ ಸಂಘ ಸಂಸ್ಥೆಗಳು ಶ್ರೀರಾಮನವಮಿಯನ್ನು ಅದ್ದೂರಿಯಾಗಿ ಆಚರಿಸಿದರು.

ಆನಂತರ ಶ್ರೀರಾಮನ ಕಲ್ಯಾಣೋತ್ಸವ ಮತ್ತು ಪ್ರಸಾದ, ದಾಸೋಹ, ಪಾನಕ, ಕೋಸಂಬರಿ ವಿತರಣೆ ನಡೆಯಿತು.

ಸಿರುಗುಪ್ಪ ನಗರದ ವಿಶ್ವ ಹಿಂದೂ ಪರಿಷತ್‍ ಹಾಗೂ ಬಜರಂಗದಳದ ವತಿಯಿಂದ “ಶ್ರೀರಾಮನವಮಿ ಅಂಗವಾಗಿ” ಪಾನಕ ಕೋಸಂಬರಿ ವಿತರಿಸಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಚೆನ್ನಬಸವನಗೌಡ ಮುಖಮಡರಾದ ಮಂಜುನಾಥ ಗೌಡ ರವಿಕುಮಾರ ಗೌಡ ನಂದೀಶ ಪ್ರವೀಣ್ ಶಾಂತ ಸ್ವಾಮಿ ಭಾಗವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT