ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋರಣಗಲ್ಲು | ಗಾಂಜಾ ಮಾರಾಟ: ಆರೋಪಿ ವಶ

Published 28 ಏಪ್ರಿಲ್ 2024, 16:11 IST
Last Updated 28 ಏಪ್ರಿಲ್ 2024, 16:11 IST
ಅಕ್ಷರ ಗಾತ್ರ

ತೋರಣಗಲ್ಲು: ಹೋಬಳಿಯ ಕುರೆಕುಪ್ಪ ಪುರಸಭೆಯ 23ನೇ ವಾರ್ಡ್‍ನ ಅಂಕಳಮ್ಮ ದೇವಸ್ಥಾನದ ಬಳಿ ಮನೆಯ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಗಾಂಜಾ ಸಹಿತ ಆರೋಪಿಯನ್ನು ವಶಕ್ಕೆ ಪಡೆದ ಘಟನೆ ಭಾನುವಾರ ನಡೆದಿದೆ.


ಬಿಹಾರ ಮೂಲದ ಸಂಜೀವ್‍ಕುಮಾರ್‍ಸಿಂಗ್ ಆರೋಪಿಯಾಗಿದ್ದು, ಆರೋಪಿಯ ಮನೆಯಲ್ಲಿದ್ದ ರೂ.6,000 ಮೌಲ್ಯದ 1,500 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


ಕಾರ್ಯಾಚರಣೆಯಲ್ಲಿ ಸಂಡೂರು ವಲಯದ ಅಬಕಾರಿ ಉಪ ಅಧಿಕ್ಷಿಕಿಯಾದ ಆಶಾರಾಣಿ, ಅಬಕಾರಿ ನಿರೀಕ್ಷಕರಾದ ಜಗದೀಶ್, ವೆಂಕಣ್ಣ, ಉರುಕುಂದಪ್ಪ, ಹರೀಶ್‍ಸಿಂಗ್ ಭಾಗವಹಿಸಿದ್ದರು.
28 ತೋರಣಗಲ್ಲು 02 ಕುರೆಕುಪ್ಪ ಪುರಸಭೆಯ 23ನೇ ವಾರ್ಡ್‍ನ ಅಂಕಳಮ್ಮ ದೇವಸ್ಥಾನದ ಬಳಿ ಮನೆಯ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಗಾಂಜಾ ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT