ಕಂಪ್ಲಿ: ಇಲ್ಲಿಯ ವಾಸವಿ ಕಲ್ಯಾಣಮಂಟಪದಲ್ಲಿ ವಾಸವಿ ಮಹಿಳಾ ಮಂಡಳಿಯವರು ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.
ಲಕ್ಷ ಶಂಭುಲಿಂಗ ಮಹಾಯಜ್ಞ, 2 ಕೋಟಿ ಪಂಚಾಕ್ಷರಿ ಮಂತ್ರ ಜಪ ಪೂಜೆ ಮತ್ತು ಗಿರಿಜಾ ಕಲ್ಯಾಣ ಮಹೋತ್ಸವ ವೈಭವದಿಂದ ಜರುಗಿದವು. ಇದಕ್ಕೂ ಮುನ್ನ ನಗೇಶ್ವರ ದೇವರಿಗೆ ವಿಶೇಷ ಅಭಿಷೇಕ, ಕನ್ಯಕಾಪರಮೇಶ್ವರಿ ದೇವಿಗೆ ಪುಷ್ಪಾಲಂಕಾರ ಶ್ರದ್ಧಾಭಕ್ತಿಯಿಂದ ನಡೆದವು. ಅರ್ಚಕ ರಾಜೇಂದ್ರಾಚಾರ್ ಬುದ್ದೀನ್ ಪೌರೋಹಿತ್ಯ ವಹಿಸಿದ್ದರು.
ಬಳಿಕ ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಟಿ. ರಮಾ ವೆಂಕಟರಮಣ ಮಾತನಾಡಿ, ‘ಲೋಕ ಕಲ್ಯಾಣಾರ್ಥ, ಸಮೃದ್ಧ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು’ ಎಂದು ವಿವರಿಸಿದರು.
ಧರ್ಮಕರ್ತ ಯಣ್ಣಿ ಚಂದ್ರಮೋಹನ್, ಆರ್ಯವೈಶ್ಯ ಸಂಘದ ಅಧ್ಯಕ್ಷ ಡಿ.ವಿ. ಸುಬ್ಬಾರಾವ್, ವಾಸವಿ ಕಲ್ಯಾಣಮಂಟಪದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಬಿ. ಕೋಟೇಶ್ವರರಾವ್, ವಾಸವಿ ಯುವಜನ ಸಂಘದ ಅಧ್ಯಕ್ಷ ಗುರುಕೃಷ್ಣ ಧನಪಾಲ್, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಡಿ. ಶ್ರೀಧರಶ್ರೇಷ್ಠಿ ಸೇರಿದಂತೆ ವಾಸವಿ ಮಹಿಳಾ ಮಂಡಳಿಯವರು, ಆರ್ಯವೈಶ್ಯ ಸಮಾಜದವರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.