ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | 'ಹೋಟೆಲ್ ಮ್ಯಾನೇಜ್‍ಮೆಂಟ್: ವಿಫುಲ ಅವಕಾಶ'

ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ
Published 13 ಮೇ 2024, 15:41 IST
Last Updated 13 ಮೇ 2024, 15:41 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ `ಸ್ಕಿಲ್ ಡೆವಲಪ್ಮೆಂಟ್ ಸೆಂಟರ್' ನೇತೃತ್ವದಲ್ಲಿ ಹೋಟೆಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ನ ಭಾಗವಾಗಿ ತೋರಣಗಲ್ಲು, ಹೊಸಪೇಟೆ ಮತ್ತು ಹಂಪೆಯ ಅಂತಾರಾಷ್ಟ್ರೀಯ ದರ್ಜೆಯ ವಿವಿಧ ಹೋಟಲ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು.

ಅಂತಾರಾಷ್ಟ್ರೀಯ ದರ್ಜೆಯ ತೋರಣಗಲ್ಲು ವಿದ್ಯಾನಗರ ಹೋಟಲ್ ಹಯಾತ್, ರಾಕ್ ರೀಜೆನ್ಸಿ, ಹೊಸಪೇಟೆಯ ರಾಯಲ್ ಆರ್ಕಿಡ್, ಹಂಪೆಯ ವಿಜಯಶ್ರೀ ಹೆರಿಟೇಜ್ ಮತ್ತು ದರೋಜಿಯ ಎವಾಲ್ವ್ ಬ್ಯಾಕ್ ಹೋಟಲ್‍ನಲ್ಲಿ ಒಟ್ಟು 33 ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು.

ಹೋಟಲ್ ಹಯಾತ್‍ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರವೀಂದ್ರನಾಥ್, ತರಬೇತಿ ಅಧಿಕಾರಿ ನೈಜಲ್ ನಾಯ್ಡು, ರಕ್ಷಿತ್ ಮತ್ತು ಶಂಪಾ ಅವರು, ವಿದ್ಯಾರ್ಥಿಗಳಿಗೆ ಹೋಟಲ್‍ನ ಕೋಣೆಗಳ ನಿರ್ವಹಣೆ, ಹೋಟಲ್‍ನಲ್ಲಿಯ ದೈನಂದಿನ ಚಟುವಟಿಕೆಗಳು, ಗ್ರಾಹಕರೊಂದಿಗಿನ ಆತ್ಮೀಯತೆ, ಶಿಸ್ತು-ಸಂಯಮ ಮತ್ತು ಇನ್ನಿತರೆಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ `ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್'ನ ಹೋಟೆಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ನ ತರಬೇತುದಾರರಾದ ಅನಿಲ್ ಕನಗಿನಿ ಮತ್ತು ಅನು, ವಿದ್ಯಾರ್ಥಿಗಳಿಗೆ ವೃತ್ತಿಪರ ಕೌಶಲ್ಯ ನೀಡಲು ಅಂತಾರಾಷ್ಟ್ರೀಯ ದರ್ಜೆಯ ಹೋಟಲ್‍ಗಳ ನಿರ್ವಹಣೆ ಮತ್ತು ದೈನಂದಿನ ಚಟುವಟಿಕೆಗಳ ಕುರಿತು ಪ್ರಾಯೋಗಿಕ ತರಬೇತಿ ಅಗತ್ಯವಾಗಿದೆ ಎಂದು ತಿಳಿಸಿದರು.

ಬಿಡಿಸಿಸಿಐನ ಜಂಟಿ ಕಾರ್ಯದರ್ಶಿ ಡಾ.ಮರ್ಚೇಡ್ ಮಲ್ಲಿಕಾರ್ಜುನ ಗೌಡ ಅವರು ಮಾತನಾಡಿ, ’ಹೋಟಲ್‍ಗಳ ನಿರ್ವಹಣೆಯಲ್ಲಿ ವೃತ್ತಿಪರತೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಜಿಲ್ಲೆಯ ನಿರುದ್ಯೋಗಿಗಳಿಗೆ ಹೋಟಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ನ ತರಬೇತಿ ನೀಡಲಾಗುತ್ತಿದೆ. ಮೊದಲನೇ ಬ್ಯಾಚ್‍ನ ಕೌಶಲ ಆಧರಿಸಿ, ಎರಡನೇ ಬ್ಯಾಚ್ ಪ್ರಾರಂಭಿಸುತ್ತೇವೆ’ ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಹಾಗೂ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್‌ನ ಕಾರ್ಯದರ್ಶಿ ಯಶವಂತರಾಜ್ ನಾಗಿರೆಡ್ಡಿ ಹೋಟೆಲ್‌ಗಳ ಮುಖ್ಯಸ್ಥರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT