ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ನಗರದಲ್ಲಿ ಸಾಧಾರಣ ಮಳೆ

Published 19 ಮೇ 2024, 15:18 IST
Last Updated 19 ಮೇ 2024, 15:18 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿ ನಗರದಲ್ಲಿ ಭಾನುವಾರ ಸಂಜೆ 20 ನಿಮಿಷ ಸಾಧಾರಣ ಮಳೆ ಸುರಿಯಿತು. 

ಗುರುವಾರ ರಾತ್ರಿ ಉತ್ತಮ ಮಳೆ ಸುರಿದಿದ್ದು ಬಿಟ್ಟರೆ, ನಂತರದ ಎರಡು ದಿನ ನಗರದಲ್ಲಿ ಅಷ್ಟಾಗಿ ಮಳೆಯಾಗಿರಲಿಲ್ಲ. ಭಾನುವಾರ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಬಿರುಬಿಸಿಲು ಕಂಡ ನಗರದಲ್ಲಿ ಸಂಜೆ 5.30 ಬಳಿಕ  ಮಳೆ ಸುರಿಯಲಾರಂಭಿಸಿತು. 

ನಗರದಲ್ಲಿ ಸಂಜೆ ಹೊತ್ತು ಮಳೆಯಾದರೆ ಸಾಮಾನ್ಯವಾಗಿ ಅಲ್ಲಲ್ಲಿ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿತ್ತು. ಆದರೆ, ಭಾನುವಾರವಾದ ಕಾರಣ ಹೆಚ್ಚಿನ ವಾಹನ ದಟ್ಟಣೆ ಇರಲಿಲ್ಲ. ಟ್ರಾಫಿಕ್‌ ಸಮಸ್ಯೆಯೂ ಆಗಲಿಲ್ಲ. ಮಳೆಯಿಂದಾಗಿ ನಗರದ ಕೆಲ ಭಾಗಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT