ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್: ಬಡ ಕುಟುಂಬದ ವಿದ್ಯಾರ್ಥಿ ಸಾಧನೆ

Published 9 ಜೂನ್ 2024, 7:06 IST
Last Updated 9 ಜೂನ್ 2024, 7:06 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ಮೈಲಾರ ಗ್ರಾಮದ ಬಡ ಕುಟುಂಬವೊಂದರ ವಿದ್ಯಾರ್ಥಿ ತೆಗ್ಗಿನಮನಿ ಫಕ್ಕಿರೇಶ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ (ನೀಟ್) ಪರೀಕ್ಷೆಯಲ್ಲಿ 720 ಅಂಕಗಳಿಗೆ 695 ಅಂಕ ಗಳಿಸಿ, ರಾಷ್ಟ್ರಮಟ್ಟದ 3103ನೇ ರ‍್ಯಾಂಕ್ ಸಾಧನೆ ಮಾಡಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿಯ ತಂದೆ ರಾಮಣ್ಣ ಮೈಲಾರ ಸುಕ್ಷೇತ್ರದಲ್ಲಿ ಗೊರವಪ್ಪನಾಗಿ ಸೇವೆ ಸಲ್ಲಿಸುತ್ತಿದ್ದು, ಭಕ್ತರು ನೀಡುವ ಕಾಣಿಕೆಯಲ್ಲಿ ಕುಟುಂಬ ನಿರ್ವಹಿಸುತ್ತಾರೆ. ತಾಯಿ ಕೆಂಚಮ್ಮ ಕೃಷಿ ಕೂಲಿ ಕೆಲಸ ಮಾಡುತ್ತಾರೆ.

ಫಕ್ಕಿರೇಶ ಮೈಲಾರದಲ್ಲಿ ಪ್ರಾಥಮಿಕ ಶಿಕ್ಷಣ, ಮದಲಗಟ್ಟಿ ಮೊರಾರ್ಜಿ ವಸತಿ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ ಎಸ್‌ಎಸ್ಎಲ್‌ಸಿಯಲ್ಲಿ ಶೇ 99 ಅಂಕ ಗಳಿಸಿದ್ದರು. ದಾವಣಗೆರೆಯ ಟೀಮ್ ಅಕಾಡೆಮಿಯವರು ವಿದ್ಯಾರ್ಥಿಯ ಪ್ರತಿಭೆ ಗುರುತಿಸಿ ಪಿಯುಸಿ ಮತ್ತು ನೀಟ್, ಸಿಇಟಿ ತರಬೇತಿಯನ್ನು ಸಂಪೂರ್ಣ ಉಚಿತವಾಗಿ ನೀಡಿದೆ.

‘ಟೀಮ್ ಅಕಾಡೆಮಿಯ ಬೋಧಕ ಸಿಬ್ಬಂದಿಯ ಪ್ರೋತ್ಸಾಹ, ಪ್ರತಿ ವಾರದ ಪರೀಕ್ಷೆಗಳಲ್ಲಿ ಸಿಕ್ಕ ಯಶಸ್ಸು ಮುನ್ನಗ್ಗಲು ಪ್ರೇರಣೆಯಾಯಿತು. ಕಠಿಣ ಪರಿಶ್ರಮ, ಗುರಿ ಸಾಧಿಸುವ ಛಲವಿದ್ದರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ನೀಟ್ ಪಾಸ್ ಮಾಡುವುದು ಕಷ್ಟವಲ್ಲ. ಸಾಧನೆ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಪರೀಕ್ಷೆ ಹತ್ತಿರವಾದಂತೆ ಅಧೀರರಾಗಬಾರದು’ ಎಂದು ಪಕ್ಕೀರೇಶ ಹೇಳಿದರು.

‘ನಾವು ಬಡವರು, ಭಕ್ತರು ನೀಡುವ ಕಾಣಿಕೆಯಿಂದಲೇ ಜೀವನ ನಿರ್ವಹಿಸುತ್ತೇವೆ. ಮಗನ ಸಾಧನೆ ತೃಪ್ತಿ ತಂದಿದೆ. ಹೊಲ, ಮನೆ ಮಾರಿಯಾದರೂ ಮಗನ ವೈದ್ಯನಾಗುವ ಕನಸು ನನಸಾಗಿಸುತ್ತೇವೆ’ ಎಂದು ತಂದೆ ರಾಮಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT