ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುರುಗೋಡು: ಸಾಗುವಳಿ ಚೀಟಿಗಾಗಿ ಅನಿರ್ದಿಷ್ಟಾವಧಿ ಧರಣಿ

Published 31 ಡಿಸೆಂಬರ್ 2023, 15:41 IST
Last Updated 31 ಡಿಸೆಂಬರ್ 2023, 15:41 IST
ಅಕ್ಷರ ಗಾತ್ರ

ಕುರುಗೋಡು: ಸಾಗುವಳಿ ಚೀಟಿಗಾಗಿ ಒತ್ತಾಯಿಸಿ ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ರೈತರು ನಡೆಸುತ್ತಿರುವ ಅನಿಷ್ಟಾವಧಿ ಧರಣಿ ಭಾನುವಾರವೂ ಮುಂದುವರಿಯಿತು.

ಕೆರೆಯ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿ 39 ದಿನಗಳಿಂದ ರೈತರು ಧರಣಿ ನಡೆಸುತ್ತಿದ್ದಾರೆ. ಆದರೆ ಈವರೆಗೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ, ಇಲ್ಲಿಗೆ ಬಾರದ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದರು.

50 ವರ್ಷಗಳಿಂದ ನಿರುಪಯುಕ್ತ ಕೆರೆ ಅಂಗಳದಲ್ಲಿ 204 ರೈತರು ಸಾಗುವಳಿ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಅವರಲ್ಲಿ ಬಹುತೇಕರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಪಹಣಿಯಲ್ಲಿ ಕೆರೆ ಎನ್ನುವ ಪದವನ್ನು ತೆಗೆದುಹಾಕಿ ಸರ್ಕಾರ ಎಂದು ನಮೂದು ಮಾಡಬೇಕು. ರೈತರಿಗೆ ಸಾಗುವಳಿ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಶಿವಶಂಕರ್, ಗಾಳಿಬಸವರಾಜ, ಎನ್.ಭೀಮಯ್ಯ, ಶಿವರಾಜ್, ಮಂಜುನಾಥ, ಅಮೀನ್ ಸಾಬ್, ಎನ್.ಬಸವರಾಜ, ಟಿ.ಎನ್.ರುದ್ರಪ್ಪ, ಫಕ್ಕೀರಪ್ಪ, ಎಚ್.ರಾಮಪ್ಪ, ಎಚ್.ಸೀನಪ್ಪ, ಸಿದ್ದಪ್ಪ, ದೊಡ್ಡಬಸಪ್ಪ, ಎನ್.ಹುಲೆಪ್ಪ, ಎ.ಮಂಜುನಾಥ, ಎಚ್.ಬಸವರಾಜ, ಕೆಂಚಪ್ಪ, ದ್ಯಾವಮ್ಮ, ಹನುಮಕ್ಕ, ಎನ್.ರಾಮಣ್ಣ, ಜಟಂಗಿ ಹನುಮಂತಪ್ಪ, ಕಟಿಗೇರು ಬಸವರಾಜ, ಎನ್.ಸೋಮಣ್ಣ, ಚಿದಾನಂದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT