ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹರಪನಹಳ್ಳಿ | ಗಿರವಿ ಚಿನ್ನಾಭರಣ, ಮುಂಗಡ ಹಣ ಸಮೇತ ವ್ಯಾಪಾರಿ ಪರಾರಿ

Published 7 ಏಪ್ರಿಲ್ 2024, 14:06 IST
Last Updated 7 ಏಪ್ರಿಲ್ 2024, 14:06 IST
ಅಕ್ಷರ ಗಾತ್ರ

ಹರಪನಹಳ್ಳಿ (ವಿಜಯನಗರ): ಬಂಗಾರದ ಆಭರಣ ಮಾಡಿಕೊಡುವುದಾಗಿ ನಂಬಿಸಿ 56 ಜನರಿಂದ ಪಡೆದಿದ್ದ ₹1.38 ಕೋಟಿ ಮುಂಗಡ ಹಣ ಹಾಗೂ ಗಿರವಿ ಇಟ್ಟುಕೊಂಡಿದ್ದ ₹59 ಲಕ್ಷ ಮೌಲ್ಯದ ಆಭರಣ ಸಮೇತ ಚಿನ್ನದ ವ್ಯಾಪಾರಿಯೊಬ್ಬ ಪರಾರಿ ಆಗಿರುವ ಘಟನೆ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ನಾಗರಾಜ್ ತಲೆಮರೆಸಿಕೊಂಡವ. ಆಂಜನೇಯ ಬಡಾವಣೆಯ ಅನ್ನಪೂರ್ಣಮ್ಮ ಸೇರಿ 56 ಜನರು ಹಣ, ಬಂಗಾರ ಕಳೆದುಕೊಂಡಿದ್ದಾರೆ.

ಪಟ್ಟಣದ ಗೊರವಿನ ತೋಟದಲ್ಲಿ ಬಂಗಾರದ ಅಂಗಡಿ ಇಟ್ಟುಕೊಂಡಿದ್ದ ನಾಗರಾಜ್ ಬಳಿ ಅನ್ನಪೂರ್ಣಮ್ಮ ಅವರು ಮೂರು ವರ್ಷಗಳ ಹಿಂದೆ 510 ಗ್ರಾಂ ತೂಕದ ಚಿನ್ನಾಭರಣ ಅಡವಿಟ್ಟು ₹15 ಲಕ್ಷ ಸಾಲ ಪಡೆದಿದ್ದರು.‌ ಕೆಲ ತಿಂಗಳ‌ ಬಳಿಕ ಸಾಲದ ಬಡ್ಡಿ ಹಣ ಮತ್ತು ಅಸಲು ₹3 ಲಕ್ಷ ವಾಪಾಸ್ ಕಟ್ಟಿದ್ದರು. ಅದೇ ರೀತಿ 56 ಜನರಿಗೆ ಆಭರಣ ತಯಾರಿಸಿಕೊಡುವುದಾಗಿ ನಂಬಿಸಿ ₹1,34,53,000 ನಗದು ಹಾಗೂ ಗಿರವಿ ಇಟ್ಟುಕೊಂಡಿದ್ದ ₹59, 08,326 ಮೌಲ್ಯದ 1858.69 ಗ್ರಾಂ ತೂಕದ ಚಿನ್ನಾಭರಣ ತೆಗೆದುಕೊಂಡು ಹೋಗಿ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ‌.

ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT