ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗ್ರಾಮಾಂತರ: ಡಾ.ಸಿ.ಎನ್‌. ಮಂಜುನಾಥ್‌ಗಿಂತ ಅವರ ಪತ್ನಿಯೇ ಸಿರಿವಂತೆ

ಕುಟುಂಬದ ಆಸ್ತಿ ₹98.38 ಕೋಟಿ; ಮಂಜುನಾಥ್ ಬಳಿ ₹1.25 ಲಕ್ಷದ ಪುಸ್ತಕಗಳು
Published 5 ಏಪ್ರಿಲ್ 2024, 5:00 IST
Last Updated 5 ಏಪ್ರಿಲ್ 2024, 5:00 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್‌. ಮಂಜುನಾಥ್ ಅವರಿಗಿಂತ ಅವರ ಪತ್ನಿ ಅನುಸೂಯ ಮಂಜುನಾಥ್ ಅವರೇ ಸಿರಿವಂತೆ!

ಹೌದು, ಗುರುವಾರ ಸಲ್ಲಿಸಿರುವ ನಾಮಪತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಅಳಿಯ ಮಂಜುನಾಥ್ ಕುಟುಂಬದ ಒಟ್ಟು ಆಸ್ತಿ ₹98.38 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ. ಅವರ ಬಳಿ ₹6.98 ಕೋಟಿ ಚರಾಸ್ತಿ ಮತ್ತು ₹36.65 ಕೋಟಿ ಸ್ಥಿರಾಸ್ತಿ ಸೇರಿ ಒಟ್ಟು ₹43,64 ಕೋಟಿ ಆಸ್ತಿ ಇದ್ದರೂ, ಸ್ವಂತ ಮನೆ ಇಲ್ಲ. ಪತ್ನಿ ಅನುಸೂಯ ಬಳಿ ₹17.36 ಕೋಟಿ ಚರಾಸ್ತಿ ಮತ್ತು ₹35.30 ಕೋಟಿ ಸ್ಥಿರಾಸ್ತಿ ಸೇರಿ ₹52.93 ಕೋಟಿ ಮೌಲ್ಯದ ಆಸ್ತಿ ಇದೆ.

ಇವರ ಅವಿಭಕ್ತ ಕುಟುಂಬದ ಆಸ್ತಿ ಮೌಲ್ಯ ₹2.07 ಕೋಟಿ. ಮಂಜುನಾಥ್ ಅವರು ₹3.74 ಕೋಟಿ ಹಾಗೂ ಅನುಸೂಯ ಅವರು ₹11.02 ಕೋಟಿ ಸಾಲ ಹೊಂದಿದ್ದು, ಕುಟುಂಬದ ಮೇಲೆ ಒಟ್ಟು ₹14.81 ಕೋಟಿ ಸಾಲದ ಹೊರೆ ಇದೆ.

ತಾಯಿಗೆ ಸಾಲ: ಅನುಸೂಯ ಅವರು ತಾಯಿ ಚನ್ನಮ್ಮ ಅವರಿಗೆ ₹19.20 ಲಕ್ಷ ಸಾಲ ನೀಡಿದ್ದರೆ, ಮಂಜುನಾಥ್ ಅವರು ಪತ್ನಿಗೆ ₹2.24 ಕೋಟಿ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೆ ₹7.5 ಲಕ್ಷ ಸಾಲ ಕೊಟ್ಟಿದ್ದಾರೆ. ಗೃಹಣಿಯಾಗಿರುವ ಅನುಸೂಯ ಅವರು, ಕೆಲ ಸಂಸ್ಥೆಗಳಲ್ಲಿ ಪಾಲುದಾರರಾಗಿದ್ದಾರೆ.

ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ₹1 ಲಕ್ಷ ಮೌಲ್ಯದ 100 ಪುಸ್ತಕಗಳು ಹಾಗೂ ₹25 ಸಾವಿರ ಮೌಲ್ಯದ ಕನ್ನಡ ಮತ್ತು ಇತರ ಪುಸ್ತಕಗಳು ಮಂಜುನಾಥ ಬಳಿ ಇವೆ.

ಮಂಜುನಾಥ್ ಅವರು ಬಿಡದಿಯ ಕೇತಗಾನಹಳ್ಳಿ, ಸ್ವಗ್ರಾಮ ಚೋಳೇನಹಳ್ಳಿಯಲ್ಲಿ ಪಿತ್ರಾರ್ಜಿತ ಕೃಷಿ ಭೂಮಿ, ಕೆಂಗೇರಿ ಬಳಿಯ ಹಾಲದೇವನಹಳ್ಳಿ ಬಳಿ ಒಂದು ನಿವೇಶನ, ಉತ್ತರಹಳ್ಳಿಯ ಗುಬ್ಬಲಾಳ ಬಳಿ 3 ಎಕರೆ ಪರಿವರ್ತಿತ ಭೂಮಿ, ಕಿಕ್ಕೇರಿಯ ಅಂಚೆ ಬೀರನಹಳ್ಳಿಯಲ್ಲಿ ಒಂದು ರೈಸ್ ಮಿಲ್ ಹೊಂದಿರುವುದಾಗಿ ಅವರು ತಮ್ಮ ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT