ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ |ನೇಹಾ ಹತ್ಯೆ: ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹ

ವೀರಶೈವ ಸಭಾದ ಪದಾಧಿಕಾರಿಗಳ ಪ್ರತಿಭಟನೆ
Published 23 ಏಪ್ರಿಲ್ 2024, 14:52 IST
Last Updated 23 ಏಪ್ರಿಲ್ 2024, 14:52 IST
ಅಕ್ಷರ ಗಾತ್ರ

ದೇವನಹಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ಆರೋಪಿಗೆ ರಾಜ್ಯ ಸರ್ಕಾರ ಗಲ್ಲು ಶಿಕ್ಷೆ ವಿಧಿಸಿ ನ್ಯಾಯ ಒದಗಿಸಬೇಕು ಎಂದು ತಾಲ್ಲೂಕು ವೀರಶೈವ ಸಭಾದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಶಿವಕುಮಾರಸ್ವಾಮಿ ವೃತ್ತದಲ್ಲಿ ನೇಹಾ ಭಾವಚಿತ್ರ ಹಿಡಿದ ನ್ಯಾಯಕ್ಕೆ ಆಗ್ರಹಿಸಿದ ಮುಖಂಡರು, ಯಾವುದೇ ಜನಾಂಗದ ಯುವತಿಯರ ಮೇಲೆ ಈ ರೀತಿಯ ಹೇಯ ಕೃತ್ಯ ಮಾಡುವವರನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲುವಂತಹ ಕಾನೂನು ರಚಿಸಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿರುವ ಬಹುಸಂಖ್ಯಾತರ ಮೇಲೆ ಅಲ್ಪಸಂಖ್ಯಾತರು ಸಾಕಷ್ಟು ಬಾರಿ ಹಲ್ಲೆ ನಡೆಸುತ್ತಿದ್ದಾರೆ. ಇದರಿಂದ ಅಮಾಯಕ ಹೆಣ್ಣು ಮಕ್ಕಳು ಜೀವ, ಮಾನ ಬಲಿಯಾಗುತ್ತಿದೆ. ಸಾರ್ವಜನಿಕರವಾಗಿ ಇವರನ್ನು ಶಿಕ್ಷಿಸಿದ್ದರೇ, ಎಲ್ಲರೂ ಬದಲಾಗುತ್ತಾರೆ ಎಂದು ತಿಳಿಸಿದರು.

ಯಾರು ಇನ್ನೊಬ್ಬರ ಪ್ರಾಣವನ್ನು ತೆಗೆಯುವಷ್ಟು ಅಮಾನವೀಯ ಕೃತ್ಯ ಮಾಡಬಾರದು, ವಿಶೇಷ ಕಾನೂನು ರಚಿಸಿ, ತ್ವರಿತ ನಾಯಾಪೀಠ ಸ್ಥಾಪಿಸಿ, ಶೀಘ್ರ ಶಿಕ್ಷೆಗೆ ಸರ್ಕಾರಗಳು ಮುಂದಾಗಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.

ವೀರಶೈವ ಮಹಾಸಭಾದ ಮುಖಂಡರಾದ ಎಂ.ಎಸ್‌.ರಮೇಶ್‌,ಪ್ರಸನ್ನಹಳ್ಳಿ ವಿರೂಪಾಕ್ಷಯ್ಯ, ವಿಜಯ್‌ಕುಮಾರ್, ಪುರಸಭೆ ಸದಸ್ಯ ನಾಗೇಶ್, ಗಿರೀಶ್‌, ಶಶಿಕಲಾ ಕಾಂತರಾಜ್, ನಳಿನಾ ಮಂಜುನಾಥ್, ನಾಗಭೂಷಣ್, ವಿಮಲಾ ಶಿವಕುಮಾರ್, ಕಾಂತರಾಜ್, ಕೆ.ಎ.ಚೇತನ್, ಚಿದಂಬರಂ, ಎಂ.ಕುಮಾರ್, ಸದಾಶಿವಯ್ಯ, ನಾಗರತ್ನ, ಸುನಂದ, ಉಮೇಶ್, ಸುನಿಲ್, ಅನಿಲ್, ವಿವೇಕ್, ಮೋಹನ್‌ಶಾಸ್ತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT