ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವನಹಳ್ಳಿ: ಅವಧಿ ಮುಗಿದ ಮದ್ಯ ನಾಶ

Published 9 ಫೆಬ್ರುವರಿ 2024, 13:22 IST
Last Updated 9 ಫೆಬ್ರುವರಿ 2024, 13:22 IST
ಅಕ್ಷರ ಗಾತ್ರ

ದೇವನಹಳ್ಳಿ: ಅವಧಿ ಮುಗಿದ ವಿವಿಧ ಬ್ರ್ಯಾಂಡ್‌ ಮದ್ಯವನ್ನು ಪ್ರಕೃತಿಗೆ ಮಾರಕವಾಗದಂತೆ ತಡೆಯಲು ಮಂಜಾಗ್ರತಾ ಕ್ರಮವಾಗಿ ನಾಶಮಾಡಲಾಯಿತು.

ಪಟ್ಟಣದ ವಿಜಯಪುರ ವೃತ್ತದಲ್ಲಿರುವ ಕರ್ನಾಟಕ ಪಾನಿಯ ನಿಗಮದ ಗೋದಾಮಿನ ಆವರಣದಲ್ಲಿ ಮಾರಾಟವಾಗದೆ ಅವದಿ ಮುಗಿದಿದ್ದ 186  ಬಾಕ್ಸ್ ಬಿಯರ್, 198 ಬಿಯರ್‌ ಬಾಟಲ್‌ ಹಾಗೂ 10 ಲ್ಯಾಬ್‌ ಕೇಸ್‌ ಬಾಕ್ಸ್‌ಗಳನ್ನು ಸರ್ಕಾರದ ನಿರ್ದೇಶನದಂತೆ ನಾಶಮಾಡಲಾಯಿತು.

ಅಬಕಾರಿ ಉಪಾಧೀಕ್ಷಕ ಬಸಪ್ಪ ಪೂಜಾರ್‌ ಮಾತನಾಡಿ, ಅವದಿ ಮುಗಿದ ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಇದರಿಂದ ವಾಂತಿ–ಭೇದಿ ಹಾಗು ಇತರೆ ಕಾಯಿಲೆಗಳಿಗೆ ಬರುತ್ತವೆ. ಹಾಗಾಗಿ ನಾಶಾಮಾಡಲಾಗುತ್ತಿದೆ ಎಂದರು.

ಕೆಎಸ್‌ಬಿಸಿಎಲ್‌ ಡಿಪೋ ಅಬಕಾರಿ ನಿರೀಕ್ಷಕಿ ಎಚ್‌.ಜೆ. ಸ್ವಿಕೃತಿ, ದೇವನಹಳ್ಳಿ ವಲಯ ಅಬಕಾರಿ ನಿರೀಕ್ಷಕ ಬಿ.ಎಂ. ಸುನಿಲ್‌, ಉಪನಿರೀಕ್ಷಕ ಪುಷ್ಪಾ, ಟಿ.ಎಸ್‌.ರೇಣುಕಪ್ಪ, ಕೆಎಸ್‌ಬಿಸಿಎಲ್‌ ಗೋದಾಮು ವ್ಯವಸ್ಥಾಪಕ ವಿಜಯ್‌ಕುಮಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT