ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೊಡ್ಡಬಳ್ಳಾಪುರ | ತಂಪಾದ ಇಳೆ; ರೈತರಲ್ಲಿ ಮಂದಹಾಸ

ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ
Published 18 ಮೇ 2024, 14:35 IST
Last Updated 18 ಮೇ 2024, 14:35 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಮುಂಗಾರು ಪೂರ್ವ ಮಳೆ ಬೀಳಲು ಆರಂಭದ ಬಳಿಕ ಇದೇ ಪ್ರಥಮ ಬಾರಿಗೆ ಶನಿವಾರ ಸಂಜೆ ಸುಮಾರು ಒಂದು ಗಂಟೆ ಕಾಲ ಮಳೆ ಬಿದ್ದಿದ್ದು, ತಾಲ್ಲೂಕಿನಾದ್ಯಂತ ಮಳೆಯಾಗಿದೆ.

ಶನಿವಾರ ಸಂಜೆ 6 ಗಂಟೆ ಸುಮಾರು ಪ್ರಾರಂಭವಾದ ಮಳೆ 7 ಗಂಟೆಯಾದರು ಸಹ ಬೀಳುತ್ತಲೇ ಇತ್ತು. ಭೂಮಿ ತಂಪಾಗುವಷ್ಟು ಮಳೆ ಬೀಳುತ್ತಿರುವುದರಿಂದ ರೈತರಲ್ಲಿ ಸಂತಸ ಮೂಡಿಸಿದೆ.

ಒಂದು ವಾರದಿಂದ ಈಚೆಗೆ ಮಳೆ ಬೀಳುತ್ತಿರುವುದರಿಂದ ರೈತರು ಟ್ರ್ಯಾಕ್ಟರ್‌ಗಳ ಮೂಲಕ ಹೊಲಗಳಲ್ಲಿ ಮೊದಲ ಉಳಿಮೆ ಪ್ರಾರಂಭಿಸಿದ್ದಾರೆ. ಮಳೆ ಆಶ್ರಯದಲ್ಲಿ ರಾಗಿ, ಮುಸುಕಿನಜೋಳ ಬೆಳೆಯುವ ರೈತರು ಸಾಮಾನ್ಯವಾಗಿ ಜೂನ್‌ ಅಂತ್ಯದ ವೇಳೆಗೆ ಭೂಮಿಯನ್ನು ಉಳಿಮೆ ಮಾಡಿ ಕೊಟ್ಟಿಗೆ ಗೊಬ್ಬರ ಹಾಕಿ ಬಿತ್ತನೆಗೆ ಹದಗೊಳಿಸಿಕೊಳ್ಳುತ್ತಾರೆ. ಮಳೆ ಆಶ್ರಯದಲ್ಲಿ ಮುಸುಕಿನಜೋಳ ಬೆಳೆಯುವ ರೈತರು ಮೇ ಅಂತ್ಯದಿಂದಲೇ ಬಿತ್ತನೆ ಪ್ರಾರಂಭಿಸಲು ಭೂಮಿ ಸಿದ್ದಗೊಳಿಸಿಕೊಂಡಿದ್ದಾರೆ.

ಕೊಳವೆ ಬಾವಿಗಳನ್ನು ಹೊಂದಿರುವ ರೈತರು ಈಗಾಗಲೇ ಮುಸುಕಿನಜೋಳ ಬಿತ್ತನೆ ಮಾಡಿದ್ದು ಈಗ ಬೀಳುತ್ತಿರುವ ಮಳೆಯಿಂದಾಗಿ ಒಂದೆರಡು ತಿಂಗಳ ಒಳಗೆ ಕಟಾವಿಗೆ ಬರುವ ಹಾಗೂ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.

ದೊಡ್ಡಬಳ್ಳಾಪುರ ಪ್ರವಾಸಿ ಮಂದಿರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಶನಿವಾರ ಸಂಜೆ ಕಂಡು ಬಂದ ಮಳೆಯ ದೃಶ್ಯ
ದೊಡ್ಡಬಳ್ಳಾಪುರ ಪ್ರವಾಸಿ ಮಂದಿರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಶನಿವಾರ ಸಂಜೆ ಕಂಡು ಬಂದ ಮಳೆಯ ದೃಶ್ಯ

Highlights - ಉಳಿಮೆ ಆರಂಭಿಸಿದ ರೈತರು ಭೂಮಿ ಹದಗೊಳಿಸುತ್ತಿರುವ ಕೃಷಿಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT