ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ರಸಗೊಬ್ಬರ ಮಳಿಗೆ ಪ್ರಾರಂಭ

Published 6 ಜೂನ್ 2024, 15:38 IST
Last Updated 6 ಜೂನ್ 2024, 15:38 IST
ಅಕ್ಷರ ಗಾತ್ರ

ದೇವನಹಳ್ಳಿ: ರೈತರಿಗೆ ಅನುಕೂಲವಾಗುವಂತೆ ಬೊಮ್ಮವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ₹20ಲಕ್ಷ ಬಂಡವಾಳ ನೀಡುವುದರ ಮೂಲಕ ನೂತನ ರಸಗೊಬ್ಬರ ಮಳಿಗೆ ತೆರೆಯಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಕೆ ನಾಗೇಶ್ ತಿಳಿಸಿದರು.

ತಾಲ್ಲೂಕಿನ ಸಾವಕನಹಳ್ಳಿ ಗೇಟ್‌ನಲ್ಲಿ ನೂತನ ರಸಗೊಬ್ಬರ ಮಳಿಗೆ ಉದ್ಘಾಟಿಸಿ ಮಾತನಾಡಿದರು. ವಿಎಸ್ಸೆಸ್ಸೆನ್ ವ್ಯಾಪ್ತಿಯ ಶೆಟ್ಟೇರಹಳ್ಳಿ, ಅಣಿಘಟ್ಟ, ಅಕ್ಕುಪೇಟೆ, ಬೊಮ್ಮವಾರ, ದೊರೆ ಕಾವಲು, ಕೋಡಿ ಮಂಚೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಮಳೆಯಾಗುತ್ತಿರುವುದರಿಂದ ಹೆಚ್ಚಿನ ರೀತಿಯಲ್ಲಿ ರಸಗೊಬ್ಬರ ದಾಸ್ತಾನು ಮಾಡಲು ತೀರ್ಮಾನಿಸಲಾಗಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದರು.

ಸಂಘದ ಉಪಾಧ್ಯಕ್ಷ ಮುನಿಕೃಷ್ಣ, ನಿರ್ದೇಶಕರಾದ ಎಸ್.ನಾಗೇಶ್, ರಾಮಮೂರ್ತಿ, ರವಿಕುಮಾರ್, ನವೀನ್ ಕುಮಾರ್, ರಾಮಾಂಜಿನಪ್ಪ, ರಮೇಶ್, ನಾರಾಯಣಸ್ವಾಮಿ, ಮುನಿಯಪ್ಪ, ಅಂಬಿಕಾ, ಪುಷ್ಪಾ, ಸಿಇಒ ಚಂದ್ರು, ಗುಮಸ್ತ ಸುರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT