ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ | ವಿಜಯಪುರ ಪಟ್ಟಣದಲ್ಲಿ ಮೇ 21ರಿಂದ ಗಂಗಾತಾಯಿ ಜಾತ್ರೆ ಆರಂಭ

Published 18 ಮೇ 2024, 14:29 IST
Last Updated 18 ಮೇ 2024, 14:29 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಪಟ್ಟಣದ ಗ್ರಾಮದೇವತೆ ಗಂಗಾತಾಯಿ ಜಾತ್ರಾ ದೀಪಾರತಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ಮೇ 21 ರಿಂದ 29 ರವರೆಗೆ ದೇವಾಲಯದ ಆವರಣದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ರಾಜ್ಯ ಗಂಗಾ ಮತಸ್ಥರ ಸಂಘಟನಾ ಕಾರ್ಯದರ್ಶಿ ಎನ್. ಮುನಿರಾಜ್ ತಿಳಿಸಿದರು.

ಮೇ 21 ರಂದು ತೋಟಿಕೆಂಪಣ್ಣ ಹಾಗೂ ದೊಡ್ಡಆಂಜಿನಪ್ಪ ಅವರ ಕುಟುಂಬದವರಿಂದ ಊರಿನ ಪ್ರಮುಖ ಬೀದಿಗಳಲ್ಲಿ ಸಾಟಿಡುವ ಕಾರ್ಯಕ್ರಮ, ಮೇ 26 ರಂದು ಪುರಸಭಾ ಸದಸ್ಯ ಎಂ.ಸತೀಶ್ ಕುಮಾರ್ ಅವರ ಕುಟುಂಬದಿಂದ 108 ಕಳಶಗಳ ಹೋಮ ಮಹಾಭಿಷೇಕ, ಸಹಸ್ರನಾಮಾರ್ಚನೆ ಪೂಜೆ, ಮೇ 27 ರಂದು ಸಂಗಮೇಶ್ವರ ದೇವಾಲಯದ ಹತ್ತಿರದಿಂದ ಜಲಗಂಗಮ್ಮನವರನ್ನು ದೇವಾಲಯಕ್ಕೆ ಬರಮಾಡಿಕೊಳ್ಳಲಾಗುವುದು. ಮೇ 28 ರಂದು ದೀಪಾರತಿ ನಡೆಯಲಿವೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT