ಚಳಿ ಹೆಚ್ಚಿರುವ ಕಾರಣ ಭಿಕ್ಷುಕರು ಅಲೆಮಾರಿಗಳು ಬೀದಿಬದಿ ವ್ಯಾಪಾರಿಗಳು ಕಟ್ಟಡ ಕಾರ್ಮಿಕರು ಆಟೊ ಚಾಲಕರಿಗೆ ಕಾರ್ಮಿಕ ಇಲಾಖೆ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಬೆಚ್ಚಗಿನ ಉಡುಪನ್ನು ಉಚಿತವಾಗಿ ವಿತರಿಸಬೇಕು.
– ವೆಂಕಟರಾಜು, ಸಿಐಟಿಯು ಮುಖಂಡ
ಬೆಳಿಗ್ಗೆ ಹೂವು ಅನ್ನು ಮಂಡಿಗೆ ಕೊಂಡೊಯ್ಯಲು ವಿಪರೀತ ತೊಂದರೆ ಇದೆ. ಬೈಕ್‌ನಲ್ಲಿ ಹೋಗಲು ಸಾಧ್ಯವಿಲ್ಲ. ಮಂಡಿಗೆ ಬೇಗ ಹೋದರೆ ಮಾತ್ರ ಹರಾಜಿನಲ್ಲಿ ಉತ್ತಮ ಬೆಲೆ ಸಿಗುತ್ತದೆ.
– ಶ್ರೀನಿವಾಸ್, ಗುಲಾಬಿ ಹೂವು ಬೆಳೆಗಾರ ಗಿದ್ದಪ್ಪನಹಳ್ಳಿ
ಕಳೆದ ತಿಂಗಳಿಂದ ಚಳಿ ಮತ್ತು ಮಂಜಿನಿಂದ ಜನ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಜನ ಮನೆಯಲ್ಲೇ ಟಿ ಕಾಫಿ ಮಾಡಿಕೊಂಡು ಕೂಡಿಯುತ್ತಿರುವ ಕಾರಣ ವ್ಯಾಪಾರನೇ ಆಗುತ್ತಿಲ್ಲ.