ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿರತೆ ದಾಳಿಗೆ ರೆಡ್‌ಬುಲ್ ನಾಯಿ ಬಲಿ

Published 12 ಫೆಬ್ರುವರಿ 2024, 16:22 IST
Last Updated 12 ಫೆಬ್ರುವರಿ 2024, 16:22 IST
ಅಕ್ಷರ ಗಾತ್ರ

ಹೊಸಕೋಟೆ: ತಾಲ್ಲೂಕಿನ ಜಡಿಗೇನಹಳ್ಳಿ ಹೋಬಳಿಯ ದೊಡ್ಡನಲ್ಲಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲಸಿನಕಾಯಿಪುರ ಗ್ರಾಮದ ತೋಟವೊಂದರಲ್ಲಿ ಕಟ್ಟಿ ಹಾಕಿದ್ದ ₹50 ಸಾವಿರ ಮೌಲ್ಯದ ‘ರೆಡ್‌ಬುಲ್’ ಸಾಕು ನಾಯಿ ಮೇಲೆ ಚಿರತೆಯೊಂದು ದಾಳಿ ನಡೆಸಿ, ತಿಂದು ಹಾಕಿದೆ.

ಗ್ರಾಮದ ಯುವ ರೈತ ರಾಮಾಂಜಿ ಎಂಬುವವರು ಜಿಂಕೆ, ನವಿಲು ಸೇರಿದಂತೆ ಇತರೆ ವನ್ಯಪ್ರಾಣಿಗಳಿಂದ ಬೆಳೆ ರಕ್ಷಿಸಲು ತೋಟ ಸಾಕಿದ್ದರು. ಭಾನುವಾರ ರಾತ್ರಿ ಚಿರತೆ ನಾಯಿಯನ್ನು ಕೊಂದು ತಿಂದು ಹೋಗಿದೆ.

ಕಾಡಂಚಿನಲ್ಲಿರುವ ಜಮೀನಿನಲ್ಲಿ ತೋಟಗಾರಿಕಾ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದೇವೆ. ವನ್ಯಪ್ರಾಣಿಗಳ ಹಾವಳಿ ನಮ್ಮ ನಿದ್ದೆ ಗೆಡಿಸಿದೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದರೂ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

ಒಮ್ಮೆಮ್ಮೆ ರಾತ್ರಿ 2.3 ಗಂಟೆಗೆ ತ್ರಿ ಪೇಸ್ ವಿದ್ಯುತ್ ನೀಡುತ್ತಾರೆ. ಆಗ ತೋಟಕ್ಕೆ ನೀರು ಹಾಯಿಸಲು ಒಬ್ಬೊಬ್ಬರೆ ಹೋಗಬೇಕಾಗುತ್ತದೆ. ಆಗ ಚಿರತೆ ಮತ್ತಿತರೆ ಪ್ರಾಣಿಗಳ ನಮ್ಮ ಮೇಲೆ ದಾಳಿ ಮಾಡುವ ಭಯ ಸದಾ ಕಾಡುತ್ತದೆ. ಹೀಗಾಗಿ ಅರಣ್ಯ ಇಲಾಖೆಯವರು ಚಿರತೆ ಸೆರೆ ಹಿಡಿಯಬೇಕು ಹಾಗೂ ಕಾಡಿನಿಂದ

ನಮ್ಮನ್ನು ಬಹು ದಿನಗಳಿಂದ ಕಾಡುತ್ತಿದೆ. ಇದೀಗ ನಡೆದಿರುವ ಘಟನೆಯಿಂದ ಮತ್ತಷ್ಟು ಭಯಭೀತರಾಗಿದ್ದೇವೆ. ಆದ್ದರಿಂದ ಸಂಬAಧಿಸಿದ ಅಧಿಕಾರಿಗಳು ಚಿರತೆಯನ್ನು ಹಿಡಿದು, ಕಾಡಿನಿಂದ ಪ್ರಾಣಿಗಳು ಹೊರಬರದಂತೆ ದೊಡ್ಡ ಕಾಲುವೆಯನ್ನು ತೆಗೆಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT