ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಮಾಡದ ಹಿಂದಿನ ಶಾಸಕರು: ಶಾಸಕ ಇಕ್ಬಾಲ್ ಹುಸೇನ್

Published 15 ಮಾರ್ಚ್ 2024, 15:17 IST
Last Updated 15 ಮಾರ್ಚ್ 2024, 15:17 IST
ಅಕ್ಷರ ಗಾತ್ರ

ಹಾರೋಹಳ್ಳಿ: ರಾಮನಗರ ವಿಧಾನ ಸಭಾ ಕ್ಷೇತ್ರದಲ್ಲಿ ಹಿಂದಿನ ಶಾಸಕರಾಗಿದ್ದವರು ಸರಿ‌ಯಾಗಿ ಕೆಲಸ ಮಾಡಿಲ್ಲ. ಇದರಿಂದಲೇ ಅವರು ಸೋತ್ತಿದ್ದಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ಹಾರೋಹಳ್ಳಿಯ ಗ್ರಾಮಾಂತರ ಪ್ರೌಢಶಾಲೆ ಸಭಾಂಗಣದಲ್ಲಿ ಗುರುವಾರ ನಡೆದ ಫಲಾನುಭವಿಗಳಿಗೆ ವಿವಿಧ ಉಪಕರಣಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿದ್ದ ಮೂಲ ಸೌಕರ್ಯಗಳ ಕೊರತೆಯನ್ನು ಪರಿಹಾರಿಸುವಲ್ಲಿ ಈ ಹಿಂದಿನ ಶಾಸಕರು ವಿಫಲರಾಗಿದ್ದರೂ, ಈಗ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇವೆ. ಕ್ಷೇತ್ರದಲ್ಲಿ 40 ವರ್ಷಗಳ ನಂತರ ಕಾಂಗ್ರೆಸ್ ಶಾಸಕರು ಗೆದ್ದಿದ್ದು ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಅನುಕೂಲ ಆಗುವಂತೆ ಕ್ಷೇತ್ರದಲ್ಲಿ 500 ಹೊಲಿಗೆ ಯಂತ್ರ ವಿತರಿಸಲಾಗುವುದು ಭರವಸೆ ನೀಡಿದರು.

ಅರ್ಹ ಫಲಾನುಭವಿಗಳಿಗೆ 24 ಹೊಲಿಗೆ ಯಂತ್ರ, 25 ಮರಗೆಲಸ ಉಪಕರಣ, 4 ಕುಲುಮೆ ಉಪಕರಣ ವಿತರಣೆ ಮಾಡಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್, ಬಮುಲ್ ನಿರ್ದೆಶಕ ಹರೀಶ್ ಕುಮಾರ್, ದಿನೇಶ್, ಸಹಾಯಕ ಗ್ರಾಮಿಣ ಕೈಗಾರಿಕ ಅಧಿಕಾರಿ ಪ್ರಕಾಶ್ ಹಾಜರಿದ್ದರು.

ಕ್ಷೇತ್ರದ ಜನರಿಗೆ ನಾವು ನೀಡಿರುವ ಭರವಸೆ ಈಡೇರಿಸಲು ಜನರ ಮನೆಯ ಮಗನಾಗಿ ಉಡುಗೊರೆ ನೀಡಿದರೆ ಪ್ರಕರಣ ದಾಖಲಿಸುವವರು ಅವರು ಕೂಡ ಜನರಿಗೆ ಉಡುಗೊರೆ ನೀಡಲು ಯಾರು ಕೂಡ ಹಸ್ತಕ್ಷೇಪ ಮಾಡುವುದಿಲ್ಲ
ಇಕ್ಬಾಲ್‌ ಹುಸೇನ್‌ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT