ಪುರಸಭೆ ಚುನಾವಣೆ: ಗರಿಗೆದರಿದ ರಾಜಕೀಯ ಚಟುವಟಿಕೆ

ಶನಿವಾರ, ಮೇ 25, 2019
27 °C

ಪುರಸಭೆ ಚುನಾವಣೆ: ಗರಿಗೆದರಿದ ರಾಜಕೀಯ ಚಟುವಟಿಕೆ

Published:
Updated:
Prajavani

ಆನೇಕಲ್ : ಪುರಸಭೆಗೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳು, ಮುಖಂಡರು, ಆಕಾಂಕ್ಷಿಗಳು ಬಿರುಸಿನ ತಯಾರಿಯಲ್ಲಿ ತೊಡಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಾವು ಅಭ್ಯರ್ಥಿಯಾಗುತ್ತಿರುವ ಬಗ್ಗೆ ಪ್ರಚಾರ ನಡೆಸುತ್ತಿದ್ದಾರೆ. 

ಮನೆ ಮನೆಗೂ ಭೇಟಿ ನೀಡಿ ಅಭಿಪ್ರಾಯ ಸಂಗ್ರಹ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಿ ಫಾರಂ ಪಡೆಯಲು ಸಾಧ್ಯವಿರುವ ಎಲ್ಲಾ ತಂತ್ರ ಹಾಗೂ ಅವಕಾಶ ಬಳಸಿ ಟಿಕೆಟ್‌ ಗಿಟ್ಟಿಸಲು ಲಾಬಿ ನಡೆಸುತ್ತಿದ್ದಾರೆ.

ವಾರ್ಡ್‌ಗಳಲ್ಲಿ ಜನರ ಸಂಪರ್ಕ ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಕಾರ್ಯದಲ್ಲಿ ಆಕಾಂಕ್ಷಿಗಳು ಹಲವು ತಿಂಗಳುಗಳಿಂದ ನಿರತರಾಗಿದ್ದರು. ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಜೂನ್‌– ಜುಲೈನಲ್ಲಿ ಪುರಸಭೆಗೆ ಚುನಾವಣೆ ನಿಗದಿಯಾಗುತ್ತದೆ ಎಂದು ನಿರಾಳರಾಗಿದ್ದ ಮುಖಂಡರಲ್ಲಿ ದಿಢೀರ್ ಚುನಾವಣೆ ಘೋಷಣೆ ಕೊಡವಿಕೊಂಡು ಎದ್ದೇಳುವಂತೆ ಮಾಡಿದೆ.

ಮೇ 9ರಿಂದ ಚುನಾವಣೆ ಅಧಿಸೂಚನೆ ಪ್ರಕಟವಾಗಲಿದ್ದು ನಾಮಪತ್ರ ಸಲ್ಲಿಸಲು ಮೇ 16 ಕಡೆ ದಿನ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಮೇ20 ಕೊನೆ ದಿನ. ಮತದಾನ ಮೇ 29ರಂದು ನಡೆಯಲಿದೆ. ಆನೇಕಲ್‌ ಪುರಸಭೆಯಲ್ಲಿ ಕಳೆದ ಅವಧಿಯಲ್ಲಿ 23 ಸ್ಥಾನಗಳಿದ್ದವು. ಪ್ರಸ್ತುತ 27 ಸ್ಥಾನಗಳು ಪುನರ್‌ ವಿಂಗಡಣೆಯಾಗಿದ್ದು ಚುನಾವಣೆ ನಡೆಯಲಿದೆ.

ವಾರ್ಡ್‌ವಾರು ಮೀಸಲಾತಿ

ವಾರ್ಡ್‌1; ಸಾಮಾನ್ಯ ಮಹಿಳೆ

ವಾರ್ಡ್‌2;ಪರಿಶಿಷ್ಟ ಜಾತಿ

ವಾರ್ಡ್‌3;ಹಿಂದುಳಿದ ವರ್ಗ (ಎ)

ವಾರ್ಡ್‌4;ಹಿಂದುಳಿದ ವರ್ಗ (ಎ)

ವಾರ್ಡ್‌5;ಹಿಂದುಳಿದ ವರ್ಗ(ಎ)(ಮಹಿಳೆ)

ವಾರ್ಡ್‌6;ಹಿಂದುಳಿದ ವರ್ಗ(ಬಿ)(ಮಹಿಳೆ)

ವಾರ್ಡ್‌7;ಹಿಂದುಳಿದ ವರ್ಗ(ಎ)(ಮಹಿಳೆ)

ವಾರ್ಡ್‌8;ಸಾಮಾನ್ಯ

ವಾರ್ಡ್9;ಸಾಮಾನ್ಯ (ಮಹಿಳೆ)

ವಾರ್ಡ್‌10;ಸಾಮಾನ್ಯ (ಮಹಿಳೆ)

ವಾರ್ಡ್‌11;ಸಾಮಾನ್ಯ ಮಹಿಳೆ

ವಾರ್ಡ್‌12;ಸಾಮಾನ್ಯ ಮಹಿಳೆ

ವಾರ್ಡ್‌13;ಸಾಮಾನ್ಯ ಮಹಿಳೆ

ವಾರ್ಡ್14;ಸಾಮಾನ್ಯ ಮಹಿಳೆ

ವಾರ್ಡ್‌15;ಹಿಂದುಳಿದ ವರ್ಗ(ಎ)

ವಾರ್ಡ್‌16; ಹಿಂದುಳಿದ ವರ್ಗ(ಎ) (ಮಹಿಳೆ)

ವಾರ್ಡ್17;ಸಾಮಾನ್ಯ

ವಾರ್ಡ್‌18;ಹಿಂದುಳಿದ ವರ್ಗ(ಎ)

ವಾರ್ಡ್‌19;ಸಾಮಾನ್ಯ

ವಾರ್ಡ್‌20;ಪರಿಶಿಷ್ಟ ಪಂಗಡ

ವಾರ್ಡ್‌21;ಸಾಮಾನ್ಯ

ವಾರ್ಡ್‌22;ಸಾಮಾನ್ಯ

ವಾರ್ಡ್‌23;ಪರಿಶಿಷ್ಟ ಜಾತಿ (ಮಹಿಳೆ)

ವಾರ್ಡ್‌24;ಪರಿಶಿಷ್ಟ ಜಾತಿ

ವಾರ್ಡ್‌25;ಸಾಮಾನ್ಯ

ವಾರ್ಡ್‌26;ಹಿಂದುಳಿದ ವರ್ಗ(ಬಿ)

ವಾರ್ಡ್‌27;ಸಾಮಾನ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !