ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ: ಓವಂ ಆಸ್ಪತ್ರೆ ಸ್ಕ್ಯಾನಿಂಗ್‌ ಕೊಠಡಿಗೆ ಬೀಗ

Published 23 ಮಾರ್ಚ್ 2024, 4:42 IST
Last Updated 23 ಮಾರ್ಚ್ 2024, 4:42 IST
ಅಕ್ಷರ ಗಾತ್ರ

ಹೊಸಕೋಟೆ: ನಗರದ ಓವಂ ಆಸ್ಪತ್ರೆಯಲ್ಲಿ ಗರ್ಭಪಾತ ನಡೆದಿರುವ ಕುರಿತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ವರದಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನಿಲ್ ಕುಮಾರ್ ನೇತೃತ್ವದ ತಂಡ ಆಸ್ಪತ್ರೆಗೆ ಭೇಟಿ ನೀಡಿ, ಸ್ಕ್ಯಾನಿಂಗ್‌ ಕೊಠಡಿಗೆ ಬೀಗ ಹಾಕಿದೆ.

ಓವಂ ಆಸ್ವತ್ರೆಯಲ್ಲಿ ಗರ್ಭಪಾತ ನಡೆದಿರುವ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಆಯುಕ್ತಾಲಯಕ್ಕೆ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಯುಕ್ತಾಲಯದ ಅಧಿಕಾರಿಗಳು ಓವಂ ಆಸ್ವತ್ರೆಯಲ್ಲಿ ತನಿಖೆ ನಡೆಸಿದರು.

ಆರೋಗ್ಯಾಧಿಕಾರಿ ಡಾ.ಸುನೀಲ್‌ ಕುಮಾರ್‌, ಮಾರ್ಚ್‌ 21ರಂದು ಆಸ್ಪತ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆಸ್ವತ್ರೆಯ ಸ್ಯಾನಿಂಗ್ ಕೊಠಡಿಗೆ ಬೀಗ ಹಾಕಿ ಕೆಲ ಯಂತ್ರಗಳನ್ನು ಜಪ್ತಿ ಮಾಡಲಾಗಿದೆ. ಹಲವು ದಾಖಲೆ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. 370 ಗರ್ಭಪಾತ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದರು.

ಆಸ್ಪತ್ರೆಯ ಸ್ಕಾö್ಯನಿಂಗ್ ಕೊಠಡಿಗೆ ಬೀಗ ಹಾಕಿ ಸೀಲ್ ಮಾಡಿದ ಅಧಿಕಾರಿಗಳು.
ಆಸ್ಪತ್ರೆಯ ಸ್ಕಾö್ಯನಿಂಗ್ ಕೊಠಡಿಗೆ ಬೀಗ ಹಾಕಿ ಸೀಲ್ ಮಾಡಿದ ಅಧಿಕಾರಿಗಳು.

ಈ ಕುರಿತು ಪ್ರತಿಕ್ರಿಯಿಸಿದ ಓವಂ ಆಸ್ವತ್ರೆ ಆಡಳಿತ ವೈದ್ಯಾಧಿಕಾರಿ ಅರುಣ್‌ಕುಮಾರ್, ಕಾಲ ಕಾಲಕ್ಕೆ ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳು ಮಾಡಿಕೊಟ್ಟಿರಲಿಲ್ಲ. ಅಕ್ರಮವಾಗಿ ಯಾವುದೇ ಗರ್ಭಪಾತ ಮಾಡಿಲ್ಲ. ಇದೆಲ್ಲ ಸುಳ್ಳು ದಾಖಲೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT