‘ದೇಶ ಕಂಡ ಅಪ್ರತಿಮ ಮುತ್ಸದ್ಧಿ’

7
ಶ್ರದ್ಧಾಂಜಲಿ ಸಭೆಯಲ್ಲಿ ದಕಿಯೋನಿಕ್ಸ್ ಮಾಜಿ ಅಧ್ಯಕ್ಷ ಎಂ.ಯಂಗಾರೆಡ್ಡಿ

‘ದೇಶ ಕಂಡ ಅಪ್ರತಿಮ ಮುತ್ಸದ್ಧಿ’

Published:
Updated:
Deccan Herald

ಆನೇಕಲ್ : ದೇಶ ಕಂಡ ಅಪ್ರತಿಮ ಮುತ್ಸದಿ, ಶ್ರೇಷ್ಠ ರಾಜನೀತಿಜ್ಞ, ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ ಅವರ ನಿಧನದಿಂದ ದೇಶದ ಪರಂಪರೆಯ ಕೊಂಡಿಯೊಂದು ಕಳಚಿ ಬಿದ್ದಿದೆ. ದೇಶ ಮತ್ತು ಬಿಜೆಪಿಗಾಗಿ ಅವಿರತವಾಗಿ ದುಡಿದ ಮಹಾನ್ ಚೇತನದ ಅಗಲಿಕೆ ದೇಶಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಎಂ.ಯಂಗಾರೆಡ್ಡಿ ತಿಳಿಸಿದರು.

ಅವರು ಪಟ್ಟಣದ ರಾಮಕುಟೀರದಲ್ಲಿ ಬಿಜೆಪಿ ಘಟಕದ ವತಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ನೆಚ್ಚಿನ ನಾಯಕನ ನಿಧನದಿಂದ ದೇಶ ಮೌನಕ್ಕೆ ಶರಣಾಗಿದೆ. ವಾಜಪೇಯಿ ಅವರು ಭಾಷಣ ಮಾಡಲು ಬರುತ್ತಾರೆ ಎಂದರೆ ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಸೇರುತ್ತಿದ್ದರು. ಅವರ ಮಾತುಗಳು ಎಲ್ಲರಿಗೂ ಜೀವಸೆಲೆಯಾಗಿದ್ದವು ಎಂದರು.

ಬಿಜೆಪಿ ಸಂಘಟನೆಯ ಮೂಲಕ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರವನ್ನು ಪೂರ್ಣಾವಧಿಗೆ ನಡೆಸಿದ ಹೆಗ್ಗಳಿಕೆ ವಾಜಪೇಯಿ ಅವರದ್ದಾಗಿದೆ ಎಂದು ತಿಳಿಸಿದರು.

ಹಿರಿಯರಾದ ಸಿ.ಎಸ್.ಕೃಷ್ಣಶಾಸ್ತ್ರಿ ಮಾತನಾಡಿ, ಎಲ್ಲರನ್ನೂ ಗೌರವದಿಂದ ನೋಡುವ ಮನೋಭಾವವುಳ್ಳ ವಾಜಪೇಯಿ ಅವರು ಎಲ್ಲ ಪಕ್ಷಗಳ ಮುಖಂಡರೊಂದಿಗೆ ವಿಶ್ವಾಸವನ್ನು ಹೊಂದಿದ್ದರು. ರಾಜಕೀಯ ಸಿದ್ಧಾಂತಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಮಾನವೀಯ ಮೌಲ್ಯಗಳಲ್ಲಿ ಭಿನ್ನಾಭಿಪ್ರಾಯವಿರಲಿಲ್ಲ. ವಿರೋಧಿಗಳನ್ನೂ ಪ್ರೀತಿ ಗೌರವದಿಂದ ನೋಡಿಕೊಳ್ಳುತ್ತಿದ್ದರು ಎಂದರು.

ಬೆಳ್ಳಾವಿ ಸಂಸ್ಥಾನ ಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ತಮ್ಮ ರಾಜನೀತಿಯ ಮೂಲಕ ವಾಜಪೇಯಿ ಅವರು ಜನಪ್ರಿಯರಾಗಿದ್ದರು. ಕಾರ್ಗಿಲ್ ಯುದ್ದದಲ್ಲಿ ಭಾರತದ ಗೆಲುವಿನಲ್ಲಿ ವಾಜಪೇಯಿ ಅವರ ಪಾತ್ರ ಪ್ರಮುಖವಾಗಿತ್ತು. ಸೈನಿಕರಿಗೆ ಮನೋಬಲವನ್ನು ತುಂಬಿ ಹೋರಾಡುವಂತೆ ಸ್ಫೂರ್ತಿ ನೀಡುತ್ತಿದ್ದರು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮುನಿರತ್ನಮ್ಮ ನಾರಾಯಣ್, ಜಿಲ್ಲಾ ಪಂಚಾಯಿತಿ ಸದಸ್ಯ ಬಂಡಾಪುರ ರಾಮಚಂದ್ರ, ಮುಖಂಡರಾದ ಆರ್.ಮಾರ್ಕಂಡರಾವ್, ವಿ.ಶ್ರೀನಿವಾಸ್, ಕೆ.ಸಿ.ರಾಮಚಂದ್ರ, ಪಟಾಪಟ್ ಶ್ರೀನಿವಾಸ್, ಕೆ.ನಾಗರಾಜು, ಜೆ.ನಾರಾಯಣಪ್ಪ, ಸಿ.ಕೆ.ಜಗನ್ನಾಥ್, ಸುರೇಶ್, ಎಂ.ನಾರಾಯಣಸ್ವಾಮಿ, ಶ್ರೀನಿವಾಸ್ ಹಾಜರಿದ್ದರು.

ತಾಲ್ಲೂಕಿನ ಬಹುತೇಕ ಎಲ್ಲಾ ಗ್ರಾಮಗಳಲ್ಲೂ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಚಂದಾಪುರ, ಅತ್ತಿಬೆಲೆ, ಸರ್ಜಾಪುರ, ಜಿಗಣಿ, ದೊಮ್ಮಸಂದ್ರಗಳಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !