ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಬಾಗೇವಾಡಿ | 17 ವರ್ಷದ ಗರ್ಭಿಣಿ ಕೊಲೆ ಪ್ರಕರಣ: ಏಳು ಮಂದಿ ಬಂಧನ

Published 11 ಮಾರ್ಚ್ 2024, 15:25 IST
Last Updated 11 ಮಾರ್ಚ್ 2024, 15:25 IST
ಅಕ್ಷರ ಗಾತ್ರ

ಹಿರೇಬಾಗೇವಾಡಿ (ಬೆಳಗಾವಿ ಜಿಲ್ಲೆ): 17 ವರ್ಷದ ಗರ್ಭಿಣಿಯ ಕೊಲೆಗೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಆರೋಪಿಗಳ ಮೇಲೆ ಪೋಕ್ಸೊ, ಬಾಲ್ಯ ವಿವಾಹ, ಅತ್ಯಾಚಾರ, ಮಾನಸಿಕ ಹಿಂಸೆ, ಕೊಲೆ ಪ್ರಕರಣಗಳನ್ನು ದಾಖಲಿಸಲಾಗಿದೆ.

ಬಾಲಕಿಯನ್ನು ಮದುವೆಯಾದ ಸಾಹಿಲ್‌ ಕುತುಬುದ್ದಿನ್‌ ಬಾಗವಾನ, ಇವರ ಸಂಬಂಧಿ ಫರೀದಾ ಕುತುಬುದ್ದಿನ್‌ ಬಾಗವಾನ, ಕುತುಬುದ್ದಿನ್‌ ಬಾಗವಾನ, ಸಲ್ಮಾನ್‌ ಕುತುಬುದ್ದಿನ್‌ ಬಾಗವಾನ, ಅಬ್ಬಾಸ್‌ ಅಬ್ದುಲ್ ಹಮೀದ್‌ ಢೋಣಿ, ಸುಮಯ್ಯಾ ಅಬ್ಬಾಸ್‌ ಡೋಣಿ ಹಾಗೂ ಮದುವೆ ಮಾಡಿದ ಮೌಲ್ವಿಯನ್ನು ಬಂಧಿಸಲಾಗಿದೆ.

‘ಕೆಲ ತಿಂಗಳ ಹಿಂದೆ ಬಾಲಕಿಯನ್ನು ಒತ್ತಾಯಪೂರ್ವಕವಾಗಿ ಮದುವೆ ಮಾಡಲಾಗಿತ್ತು. ಅವರು ನಾಲ್ಕು ತಿಂಗಳ ಗರ್ಭಿಣಿ ಆಗಿದ್ದು ಮಾರ್ಚ್‌ನಲ್ಲಿ ಗೊತ್ತಾಯಿತು. ಅವರಿಗೆ ಅಡುಗೆ, ಮನೆಗೆಲಸ ಮಾಡಲು ಬರುವುದಿಲ್ಲ ಎಂದು ಆರೋಪಿಗಳು ದಿನವೂ ಕಿರುಕುಳ ನೀಡುತ್ತಿದ್ದರು. ಮಾರ್ಚ್‌ 3ರಂದು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ’ ಎಂದು ಆರೋಪಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸುರೇಖಾ ಶಿವಪ್ಪ ಹಂಚಿನಮನಿ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT