ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಶಿಸುತ್ತಿರುವ ಮಾನವೀಯ ಮೌಲ್ಯ: ಸ್ವಾಮೀಜಿ

ಸಾಧಕರ ಮಹಾಸಂಗಮ ಪ್ರಶಸ್ತಿ ಪ್ರದಾನ
Published 29 ಫೆಬ್ರುವರಿ 2024, 12:57 IST
Last Updated 29 ಫೆಬ್ರುವರಿ 2024, 12:57 IST
ಅಕ್ಷರ ಗಾತ್ರ

ರಾಮದುರ್ಗ: ‘ನಾಗರಿಕರಲ್ಲಿನ ಮಾನವೀಯ ಮೌಲ್ಯಗಳು ನಶಿಸುತ್ತಿವೆ. ತಂತ್ರಜ್ಞಾನದ ಸದ್ಭಳಕೆಗಿಂತ ದುರ್ಬಳಕೆಯಾಗುತ್ತಿರುವುದು ವಿಷಾದನೀಯ’ ಎಂದು ಖಜೂರಿ ಕೋರಣೇಶ್ವರ ಮಠದ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳು ಕಳವಳ ವ್ಯಕ್ತಪಡಿಸಿದರು.

ಸಮೀಪದ ತುರನೂರ ಗ್ರಾಮದ ಸಿದ್ಧಲಿಂಗೇಶ್ವರ ದೇವಸ್ಥಾನದದಲ್ಲಿ ನಡೆದ ಮೌಲ್ಯಸಂಪದ 19ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡ ರಾಷ್ಟ್ರೀಯ ಸಾಧಕರ ಮಹಾಸಂಗಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ವೈಜ್ಞಾನಿಕ ಬೆಳವಣಿಗೆಯ ವೇಗವನ್ನು ಗಮನಿಸಿದಾಗ ಇಡೀ ಜಗತ್ತನ್ನು ಅಂಗೈಯಲ್ಲಿ ಹಿಡಿದಂತಾಗಿದೆ. ಆದರೆ ಒಬ್ಬ ಬಡವ ನಮ್ಮಿಂದ ದೂರವಾಗಿದ್ದಾನೆ. ಮೌಲ್ಯಯುಕ್ತ ಸಂಬಂಧಗಳಿಗೆ ಪೆಟ್ಟು ಬಿದ್ದಿರುವುದರಲ್ಲಿ ಸಂದೇಹ ಇಲ್ಲ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಮಾತನಾಡಿ, ‘ಬಹಳ ವರ್ಷಗಳಿಂದ ಮೌಲ್ಯಸಂಪದ ಕಾರ್ಯಕ್ರಮ ಸಮಾಜಮುಖಿಯಾಗಿ ನಡೆದಿದೆ. ನಡೆಸುವವರ ಇಚ್ಛಾಶಕ್ತಿಗೆ ದೇವರು ಇನ್ನಷ್ಟು ಶಕ್ತಿ ತುಂಬಲಿ’ ಎಂದರು.

ಮೌಲ್ಯಸಂಪದ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷೆ ಶೈಲಾ ಸೊಗಲದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ 41 ಜನ ಸಾಧಕರಿಗೆ ರಾಜ್ಯ ಮಟ್ಟದ ಮೌಲ್ಯಸಂಪದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ರೈತ ಕವಿ ವಿಜಯ ಡಿ. ಸಕ್ರಿಯವರ ಕವನ ಸಂಕಲನ ‘ಭಾವಗಳ ಚಿತ್ತಾರ’ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯಾಧ್ಯಕ್ಷೆ ರಜನಿ ಅಶೋಕ ಜೀರಗ್ಯಾಳ, ಸಾಹಿತಿಗಳಾದ ಆರ್.ಎಸ್. ಪಾಟೀಲ, ವೆಂಕಟೇಶ ಹುಣಸಿಕಟ್ಟಿ, ಎಸ್.ಎಂ. ಕೋರೆ, ಬಿ.ಎಸ್. ಅಲಗುಸುಂದರಂ, ಶ್ರೀದೇವಿಮಾದನ್ನವರ, ಡಾ.ಬಿ.ಕೆ.ಗವಿಮಠ, ಎ.ಎನ್. ಹಪ್ಪಳದ, ಎಸ್.ಎಸ್.ಮುದೇನೂರ, ತಿಪ್ಪಣ್ಣ ಮುರುಗೋಡ, ಬಸವರಾಜ ಗಡದ, ಬಸಂತಿ ಹಪ್ಪಳದ, ಲೋಕಣ್ಣ ಮಾಳಿ, ಎಸ್.ಎಂ. ಸಕ್ರಿ, ಡಾ. ಬಿ.ಎಲ್. ಸಂಕನಗೌಡ್ರ, ಎಚ್.ಆರ್. ಪಾಟೀಲ, ಡಾ.ಕೆ.ವಿ. ಪಾಟೀಲ ಇದ್ದರು.

ಬಿ.ಬಿ.ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತ ಶಿಕ್ಷಕ ಪಿ.ಎಂ. ಹೂಗಾರ ಸ್ವಾಗತಿಸಿದರು. ಶಿಕ್ಷಕ ಬಾಹುಬಲಿ ನರವಡೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT