ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಡಿಸಿ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನ

Published 10 ಜನವರಿ 2024, 16:30 IST
Last Updated 10 ಜನವರಿ 2024, 16:30 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಯುವಕ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಗೋಕಾಕ ತಾಲ್ಲೂಕಿನ ಲಗಮೇಶ್ವರ ಗ್ರಾಮದ ಕುಮಾರ ಕಲ್ಲಪ್ಪ ಕೊಪ್ಪದ (23) ಆತ್ಮಹತ್ಯೆಗೆ ಯತ್ನಿಸಿದ್ದು,  ಆಂಬುಲೆನ್ಸ್‌ನಲ್ಲಿ ಕರೆದೊಯ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ’ ಎಂದು ಮಾರ್ಕೆಟ್ ಠಾಣೆ ಪೊಲೀಸರು ತಿಳಿಸಿದ್ದಾರೆ.

‘ಕುಡಿಯುವ ನೀರಿನ ಬಾಟಲಿಯಲ್ಲಿ ಕ್ರಿಮಿನಾಶಕ ಹಾಕಿಕೊಂಡು ಬಂದ ಕುಮಾರ ಕೆಲ ಹೊತ್ತು ಅತ್ತಿತ್ತ ಸುಳಿದಾಡಿ ಕ್ರಿಮಿನಾಶಕ ಕುಡಿದ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ‘ಯುವಕನಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಯಾವುದೇ ಕೆಲಸ ಇರಲಿಲ್ಲ. ಯಾವುದೇ ಸರ್ಕಾರಿ ಯೋಜನೆಯ ಕೆಲಸಕ್ಕೂ, ಮನವಿ ನೀಡಲೂ ಅವರು ಬಂದಿಲ್ಲ. ಲಗಮೇಶ್ವರ ಗ್ರಾಮದಲ್ಲಿ ಯುವಕ ಎರಡು ದಿನಗಳ ಹಿಂದೆ ಕೆಲವರೊಂದಿಗೆ ಜಗಳ ಮಾಡಿಕೊಂಡಿದ್ದ. ಅವರು ಪೊಲೀಸ್‌ ದೂರು ನೀಡಿದ್ದಾರೆ. ಪೊಲೀಸರು ಬಂಧಿಸುತ್ತಾರೆ ಎಂಬ ಭಯದಿಂದ ಊರು ಬಿಟ್ಟು ಬೆಳಗಾವಿಯಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ಇದ್ದ. ಎರಡು ದಿನಗಳ ಬಳಿಕ ಸಂಬಂಧಿಕರು ಆತನ ಕೈಯಲ್ಲಿ ₹200 ಕೊಟ್ಟು ಊರಿಗೆ ಮರಳುವಂತೆ ತಿಳಿಸಿದ್ದರು. ಆ ಹಣದಿಂದ ಕ್ರಿಮಿನಾಶಕ ಖರೀದಿಸಿದ ಯುವಕ, ಎತ್ತ ಹೋಗಬೇಕು ಎಂದು ಗೊತ್ತಾಗದೇ ಜಿಲ್ಲಾಧಿಕಾರಿ ಕಚೇರಿ ಬಂದು ಕುಡಿದಿದ್ದಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT