ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಕುಳಿ; ಗಮನ ಸೆಳೆದ ಸ್ಪರ್ಧೆಗಳು

Published 26 ಮೇ 2024, 16:27 IST
Last Updated 26 ಮೇ 2024, 16:27 IST
ಅಕ್ಷರ ಗಾತ್ರ

ಕಬ್ಬೂರ: ಪಟ್ಟಣದಲ್ಲಿ ಹನುಮಾನ (ಮಾರುತಿ) ದೇವರ ಓಕುಳಿ ಅಂಗವಾಗಿ ಭಾನುವಾರ ವಿವಿಧ ಸ್ಪರ್ಧೆಗಳು ನಡೆದವು.

ಇಲ್ಲಿನ ರಾಯಬಾಗ ರಸ್ತೆಯ ಹೆಸ್ಕಾಂ ಕಚೇರಿಯಿಂದ ಮಾಡಲಗಿ ಗ್ರಾಮದವರೆಗೆ (5 ಕಿ.ಮೀ.) ಆಯೋಜಿಸಿದ್ದ  ಸ್ಪರ್ಧೆಗಳಿಗೆ ಕಬ್ಬೂರ ಪಿಕೆಪಿಎಸ್‌ ಅಧ್ಯಕ್ಷ ಮಿಲನ ಪಾಟೀಲ ಚಾಲನೆ ನೀಡಿದರು. ಪುಟ್ಟು ಹಳ್ಳೂರ, ಸುನೀಲ ಕುಲಕರ್ಣಿ, ಶಂಕರ ವಡೇರ, ಮಲ್ಲಪ್ಪಾ ಕಾಮಗೌಡ, ಅಪ್ಪು ಹೇರಲಗಿ, ನೇಮಿನಾಥ ಕಾಗವಾಡೆ ಇದ್ದರು.

ಜೋಡು ಕುದುರೆ ಗಾಡಿ ಓಡಿಸುವ ಸ್ಪರ್ಧೆಯಲ್ಲಿ ಅಜ್ಜಪ್ಪ ಶಿರಹಟ್ಟಿ ಪ್ರಥಮ, ಹನುಮಾನ ವಡ್ರಟ್ಟಿ ದ್ವಿತೀಯ, ಮಹಾಂತೇಶ ಚಿಕ್ಕೋಡಿ ತೃತೀಯ, ಕುಳಿತು ಕುದುರೆ ಓಡಿಸುವ ಸ್ಪರ್ಧೆಯಲ್ಲಿ ಹನುಮಂತ ಮಗದುಮ್ಮ ಪ್ರಥಮ, ಚಂದ್ರಮ್ಮದೇವಿ ಹಿಡಕಲ್ಲ ದ್ವಿತೀಯ, ನಿಖಿಲ ಕಾಂಬಳೆ ತೃತೀಯ ಸ್ಥಾನ ಗಳಿಸಿದರು.

ನಿಧಾನವಾಗಿ ದ್ವಿಚಕ್ರ ವಾಹನ ಓಡಿಸುವ ಸ್ಪರ್ಧೆಯಲ್ಲಿ ಎಸ್‌.ಜಿ.ಮಗದುಮ್ಮ ಪ್ರಥಮ, ಭೀಮಪ್ಪ ಮದರಖಂಡಿ ದ್ವಿತೀಯ, ಪುಟ್ಟು ಬಸ್ತವಾಡೆ ತೃತೀಯ, ವೈಯಕ್ತಿಕ ಓಟದ ಸ್ಪರ್ಧೆಯಲ್ಲಿ ಅಜೀತ ಹಿರೇಕುರಬರ ಪ್ರಥಮ, ಕಿರಣ ಸಂಗಟೆ ದ್ವಿತೀಯ, ಕುಮಾರ ವಡೇರ ತೃತೀಯ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT