ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಯಕರ್ತೆಯರಿಗೆ ಸಿಗಲಿದೆ ‘ಸ್ಮಾರ್ಟ್‌ಫೋನ್‌’

Published 17 ಫೆಬ್ರುವರಿ 2024, 8:31 IST
Last Updated 17 ಫೆಬ್ರುವರಿ 2024, 8:31 IST
ಅಕ್ಷರ ಗಾತ್ರ

ಬೆಳಗಾವಿ: ‘ಅಂಗನವಾಡಿ ಕೇಂದ್ರಗಳ ಮೂಲಕ ಕೈಗೊಳ್ಳುವ ಚಟುವಟಿಕೆ ಸುಗಮಗೊಳಿಸಲು ₹90 ಕೋಟಿ ವೆಚ್ಚದಲ್ಲಿ 75,938 ಸ್ಮಾರ್ಟ್‌ಫೋನ್‌ಗಳನ್ನು ಒದಗಿಸಲಾಗುವುದು’ ಎಂದು ಬಜೆಟ್‌ನಲ್ಲಿ ಘೋಷಿಸಿದ್ದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕಿಯರಿಗೆ ನಿರಾಳವಾಗಿಸಿದೆ.

ರಾಜ್ಯದಲ್ಲಿ 63 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದಿಂದ ‘ಪೋಷಣ’ ಅಭಿಯಾನದಡಿ 2020–21ನೇ ಸಾಲಿನಲ್ಲಿ ಸ್ಮಾರ್ಟ್‌ಫೋನ್‌ ವಿತರಿಸಲಾಗಿತ್ತು. ಆರಂಭಿಕ ದಿನಗಳಲ್ಲಿ ಈ ಮೊಬೈಲ್‌ ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದವು.

‘ದಿನಕಳೆದಂತೆ ವಿವಿಧ ಇಲಾಖೆಗಳ ಸಮೀಕ್ಷೆ ಮತ್ತು ಚುನಾವಣೆ ಕರ್ತವ್ಯದ ಚಟುವಟಿಕೆಗಳನ್ನು ದಾಖಲಿಸುವ ಕೆಲಸ ನಡೆಯಿತು. ದಾಖಲೆಗಳ ‘ಭಾರ’ ಹೆಚ್ಚಾದಂತೆ, ಮೊಬೈಲ್‌ ಕಾರ್ಯಸಾಮರ್ಥ್ಯ ಕುಂದಿತು. ಇದರೊಂದಿಗೆ ಇಂಟರ್‌ನೆಟ್‌ ಸಮಸ್ಯೆ ಕಾಡತೊಡಗಿತು. ಈಗ ಮೊಬೈಲ್‌ ಬಳಕೆಯೇ ಕಷ್ಟಕರವಾಗಿದೆ. ಪದೇಪದೆ ಸ್ಥಗಿತಗೊಳ್ಳುತ್ತಿದೆ’ ಎಂದು ಕಾರ್ಯಕರ್ತೆಯರು ಅಳಲು ತೋಡಿಕೊಂಡಿದ್ದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ಟಿದ್ದ ಸ್ಮಾರ್ಟ್‌ಫೋನ್‌ ಹಾಳಾದ ಕುರಿತು 2023 ಜುಲೈ 23ರ ‘ಪ್ರಜಾವಾಣಿ’ ಸಂಚಿಕೆಯಲ್ಲಿ ಕಾರ್ಯ‘ಭಾರ’ಕ್ಕೆ ಸೋತ ಅಂಗನವಾಡಿ ‘ಸ್ಮಾರ್ಟ್‌ಫೋನ್‌’ ಎಂಬ ಮುಖಪುಟ ವಿಶೇಷ ವರದಿ ಪ್ರಕಟವಾಗಿತ್ತು.

ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್‌ ಕೊಡಲು ಮುಂದಾಗಿರುವುದು ಸ್ವಾಗತಾರ್ಹ ನಿರ್ಧಾರ. ಆದರೆ ಈಗಿನ ಕಾರ್ಯಭಾರಕ್ಕೆ ಪೂರಕವಾಗಿ ಕೆಲಸ ಮಾಡಬಲ್ಲ ಮೊಬೈಲ್‌ಗಳನ್ನು ಶೀಘ್ರವೇ ವಿತರಿಸಬೇಕು –ಮಂದಾ ನೇವಗಿ ತಾಲ್ಲೂಕು ಘಟಕದ ಅಧ್ಯಕ್ಷೆ ಸಿಐಟಿಯು ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT