ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಭವಿಷ್ಯಕ್ಕಾಗಿ ಬಿಜೆಪಿ ಬೆಂಬಲಿಸಿ

ಕೆಎಲ್ಇ ಶೇಷದ್ರಿ ಕಾಲೇಜಿನಲ್ಲಿ ಚುನಾವಣೆ ಪ್ರಚಾರ ನಡೆಸಿದ ಜಗದೀಶ ಶೆಟ್ಟರ್‌
Published 27 ಏಪ್ರಿಲ್ 2024, 15:20 IST
Last Updated 27 ಏಪ್ರಿಲ್ 2024, 15:20 IST
ಅಕ್ಷರ ಗಾತ್ರ

ಬೆಳಗಾವಿ: ‘ದಿನದ 24 ಗಂಟೆ ದೇಶದಲ್ಲಿ ಮೋದಿ ಅವರು ಕೆಲಸ ಮಾಡಿದ್ದಾರೆ. ಅವರ ದೂರ ದೃಷ್ಟಿ ದೇಶದ ಚಿತ್ರಣವನ್ನೇ ಬದಲಾವಣೆ ಮಾಡಿದೆ. ಹಾಗಾಗಿ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಲು ನನ್ನನ್ನು ಗೆಲ್ಲಿಸಬೇಕು’ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಮನವಿ ಮಾಡಿದರು‌.

ನಗರದ ಕೆಎಲ್ಇ ಶೇಷದ್ರಿ ಕಾಲೇಜಿನಲ್ಲಿ ಶುಕ್ರವಾರ ಲೋಕಸಭಾ ಚುನಾವಣೆ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ‘ಗುಜರಾತ್ ಮಾದರಿ ಮ‌ೂಲಕ ಮೋದಿಯವರು ದೇಶದಲ್ಲಿ ಮನೆ ಮಾತಾಗಿದ್ದಾರೆ. ದೇಶದ ಭದ್ರತೆ, ಭವಿಷ್ಯ ನಿರ್ಧಾರ ಮಾಡುವ ಚುನಾವಣೆ ಇದು. ಮೋದಿ ಅವರು ತಮ್ಮ ಆಡಳಿತ ಅವಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ಮಾಡಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟಿದ್ದಾರೆ. ಹಿಂದಿನ ಯುಪಿಯ ಸರ್ಕಾರದಲ್ಲಿ 2ಜಿ ಹಗರಣ ಸೇರಿದಂತೆ ಅನೇಕ ಹಗರಣಗಳು ಬೆಳಕಿಗೆ ಬಂದವವು. ಲಕ್ಷಾಂತರ ಕೋಟಿಯ ಹಗರಣಗಳ ತನಿಖೆ ಇಂದು ನಡೆಯುತ್ತಿದೆ. ಆದರೆ, 10 ವರ್ಷದ ಆಡಳಿತದಲ್ಲಿ ಮೋದಿ ಒಂದೇ ಒಂದು ಭ್ರಷ್ಟಾಚಾರ ಇಲ್ಲದೆ ಆಡಳಿತ ಮಾಡಿದ್ದಾರೆ’ ಎಂದು ತಳಿಸಿದರು‌.

‘ಹಿಂದಿನ ಸರ್ಕಾರದಲ್ಲಿ ₹100 ಜನರಿಗೆ ಬಿಡುಗಡೆ ಆದರೆ ಫಲಾನುಭವಿಗೆ ಕೇವಲ ₹15 ತಲುಪುತ್ತಿತ್ತು. ಅಷ್ಟೊಂದು ಹಗರಣ ನಡೆಯುತ್ತಿತ್ತು.‌ ಆದರೆ ಮೊದಿಯವರು ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ, ಭ್ರಷ್ಟಾಚಾರ ಕೊನೆಗಾಣಿಸಿದರು. ಕೃಷಿ ಸಮ್ಮಾನ್ ಯೋಜನೆ ಅಡಿ ವರ್ಷಕ್ಕೆ ₹6,000 ನೇರವಾಗಿ ರೈತರ ಖಾತೆಗೆ ಬರುತ್ತಿದೆ‌. ಇದರಲ್ಲಿ ಒಂದೆ ಒಂದು ರೂಪಾಯಿ ಸೋರಿಕೆ ಆಗುವುದಿಲ್ಲ. ಜನಧನ ಖಾತೆ ಮೂಲಕ ಬಡ ವ್ಯಕ್ತಿ ಕೂಡ ಉಚಿತವಾಗಿ ಖಾತೆ ತೆರೆಯಲು ಅವಕಾಶ ನೀಡದ್ದು ಮೋದಿಯವರು. ದೇಶದಲ್ಲಿ ಸದಾ ಕಾಲ ಶಾಂತಿಯುತ ವಾತಾವರಣ ನಿರ್ಮಾಣವಾಗಿರಲು ಮೋದಿಯವರ ಆಡಳಿತ ಮುಖ್ಯ‌ವಾಗಿದೆ‌’ ಎಂದರು.

ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ ಕೋರೆ ಮಾತನಾಡಿ, ‘ದೇಶದ ರಕ್ಷಣಾ ವಲಯದಲ್ಲಿ ಸದ್ಯದ ಉತ್ಪಾದನೆ ಶೇ 70 ಇದೆ‌. ಬುಲೆಟ್ ಪ್ರೂಫ್, ಲೈವ್ ಜಾಕೆಟ್‌ಗಳು ಕೂಡ ದೇಶದಲ್ಲಿಯೇ ಉತ್ಪಾದನೆ ಮಾಡಲಾಗುತ್ತಿದೆ. ಈ ಹಿಂದೆ ನಮ್ಮ ನಾಯಕರು ಸರಿ ಇರಲಿಲ್ಲ. ಅವರಿಗೆ ಆಮದು ಮಾಡಿಕೊಳ್ಳುವುದು ಅಷ್ಟೇ ಗೊತ್ತಿತ್ತು.‌ ನಮ್ಮಲ್ಲಿ ಸಕ್ಕರೆ ಉತ್ಪಾದನೆ ಆರಂಭ ಆಗಿ 100 ವರ್ಷ ಆಗಿದೆ. ಜಿಲ್ಲೆಯಲ್ಲಿ 28  ಸಕ್ಕರೆ ಕಾರ್ಖಾನೆಗಳಿವೆ. ಸಕ್ಕರೆ ಬೈ ಪ್ರೊಡಕ್ಟ್ ಎಥೆನಾಲ್. ಮೋದಿ ಅವರು ಪ್ರಧಾನಿ ಆದ ಬಳಿಲ ಸಕ್ಕರೆ ಉದ್ಯಮದಲ್ಲಿ ಎಥೆನಾಲ್ ಉತ್ಪಾದನೆಗೆ ಉತ್ತೇಜನ ನೀಡಿದರು. ಎಥೆನಾಲ್ ಉತ್ಪಾದನೆಗೆ ಎಲ್ಲ ಸಕ್ಕರೆ ಕಾರ್ಖಾನೆಗೆ ಪರವಾನಗಿ ನೀಡಿದರು. ಪೆಟ್ರೋಲಿಯಂನಲ್ಲಿ ಎಥಾನಲ್ ಶೇ10 ರಿಂದ ಶೇ 20ರಷ್ಟು ಸೇರಿಸಬಹುದಾದ ಶಕ್ತಿ ನಮ್ಮಲ್ಲಿ ಬಂದಿದೆ’ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಶೇಷಾದ್ರಿ ಕಾಲೇಜಿನ ಪ್ರಾಂಶುಪಾಲ ಎಸ್.ಎ. ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮಾರುಕಟ್ಟೆಯಲ್ಲಿ ಚಾಯ್ ಪೆ ಚರ್ಚಾ

ಬಿಜೆಪಿ ಅಭ್ಯರ್ಥಿ ಜ‌ಗದೀಶ ಶೆಟ್ಟರ್ ಅವರು ಬೆಳಗಾವಿಯ ತರಕಾರಿ ಮಾರುಕಟ್ಟೆಯಲ್ಲಿ ಶನಿವಾರ ಬೆಳಿಗ್ಗೆ ಚಾಯ್‌ ಪೇ ಚರ್ಚಾ ಮೂಲಕ ಮತ ಕೋರಿದರು. ಗಾಂಧಿ ನಗರದ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ರೈತರು ಹಾಗೂ ಸಾರ್ವಜನಿಕರನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು. ಬಿಜೆಪಿ ರಾಜ್ಯ ಘಟಕದ ಉಪಾದ್ಯಕ್ಷ ಅನಿಲ ಬೆನಕೆ ಜೈ ಕಿಸಾನ್ ವೆಜಿಟೇಬಲ್ ಮಾರ್ಕೆಟ್ ಅಧ್ಯಕ್ಷರಾದ ದೀವಾಕರ ಪಾಟೀಲ ಉಪಾಧ್ಯಕ್ಷ ಮೋಹನ ಮನ್ನೋಳಕರ ಕಾರ್ಯದರ್ಶಿ ಎ‌.ಕೆ. ಬಗವಾನ್ ಪ್ರಮುಖರಾದ ಡಾ.ರವಿ ಪಾಟೀಲ ವಿಶ್ವನಾಥ ಪಾಟೀಲ ಎಂ.ಎಂ. ದೋಣಿ ಉಮೇಶ ಪಾಟೀಲ ಕುಲದೀಪ ತಹಶೀಲ್ದಾರ ಪಿ.ಬಿ. ಬಾಬಣ್ಣವರ ಲಕ್ಷ್ಮಣ ಅಂಬೋಜಿ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT