ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಮ್ಮನ ಕಿತ್ತೂರು | ‘ಬಹುಜನರ ಭಾವನೆಗೆ ಗೌರವ ನೀಡದ ಕಾಂಗ್ರೆಸ್’

Published 4 ಮೇ 2024, 15:43 IST
Last Updated 4 ಮೇ 2024, 15:43 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ‘ದೇಶದ ಬಹುಜನರ ಭಾವನೆಗಳಿಗೆ ಕಾಂಗ್ರೆಸ್ ಪಕ್ಷ ಗೌರವ ನೀಡುತ್ತಿಲ್ಲ. ಒಂದು ಕೋಮಿನ ಜನರನ್ನು ಓಲೈಕೆ ಮಾಡಲು  ಹೊರಟಿದೆ’ ಎಂದು ಉತ್ತರ ಕನ್ನಡ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಲ್ಲೂಕಿನ ಅವರಾದಿ ಗ್ರಾಮದಲ್ಲಿ ಶುಕ್ರವಾರ ನಡೆದ ಬಹಿರಂಗ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಈಗ ಬಂದಿರುವುದು ದೇಶದ ಭವಿಷ್ಯ ಬರೆಯುವ ಚುನಾವಣೆ. ದೇಶದ ಸುರಕ್ಷತೆ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಕೆಲವರು ದುಡ್ಡು ಹಿಡಿದುಕೊಂಡು ಮತ ನೀಡುವಂತೆ ಬರುತ್ತಾರೆ. ಅವರಿಗೆ ನಮ್ಮ ಮತ ಮಾರಾಟಕ್ಕಿಲ್ಲ ಎಂದು ಹೇಳಬೇಕು’ ಎಂದು ಸಲಹೆ ನೀಡಿದರು.

‘ಗ್ಯಾರಂಟಿ ಹೆಸರಿನಲ್ಲಿ ಮಹಿಳೆಯರಿಗೆ ದುಡ್ಡು ನೀಡಿ ಪುರುಷರಿಂದ ಕಿತ್ತುಕೊಳ್ಳುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ದಿನವಿಡಿ ಕೆಲಸ ಮಾಡಿ ಸಂಜೆ ಬೇಸರ ಕಳೆದುಕೊಳ್ಳಲು ತೆಗೆದುಕೊಳ್ಳುವ ‘ಔಷಧ’ (ಮದ್ಯ)ದ ಬೆಲೆ ದುಪ್ಪಟ್ಟು ಮಾಡಲಾಗಿದೆ’ ಎಂದು ಟೀಕಿಸಿದರು.

ಮುಖಂಡ ಪ್ರಭಾಕರ ಕೋರೆ ಮಾತನಾಡಿ, ‘ಮೋದಿ ಅವರ ಹತ್ತು ವರ್ಷದ ಆಡಳಿತದಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಯಿತು. ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯಲಾಯಿತು’ ಎಂದರು.

ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಸುರೇಶ ಮಾರಿಹಾಳ, ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ, ಮುಖಂಡರಾದ ನಜೀರಅಹ್ಮದ ಹವಾಲ್ದಾರ್, ನಿಜಲಿಂಗಯ್ಯ ಹಿರೇಮಠ, ಶ್ರೀಕರ ಕುಲಕರ್ಣಿ, ಅಶ್ವಿನಿ ಪೂಜೇರ, ಬಸವರಾಜ ಮಾತನವರ ಹಾಗೂ ಅವರಾದಿ ಸೇರಿದಂತೆ ನಿಚ್ಚಣಕಿ, ಶಿವನೂರು, ಮರಿಗೇರಿ ಮೇಟ್ಯಾಲ್, ಹಿರೇನಂದಿಹಳ್ಳಿ, ಚಿಕ್ಕನಂದಿಹಳ್ಳಿ, ಉಗರಖೋಡ ಗ್ರಾಮಗಳ ಬಿಜೆಪಿ ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT