ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಿಷೇಧಿತ ಉತ್ಪನ್ನಗಳನ್ನು ಮಾರುತ್ತಿದ್ದ ಇಬ್ಬರ ಬಂಧನ

Published 14 ಮಾರ್ಚ್ 2024, 5:43 IST
Last Updated 14 ಮಾರ್ಚ್ 2024, 5:43 IST
ಅಕ್ಷರ ಗಾತ್ರ

ಬೆಳಗಾವಿ: ಕೇಂದ್ರ ಸರ್ಕಾರ ನಿಷೇಧಿಸಿದ ಹುಕ್ಕಾ ಬಾರ್‌ ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಇಲ್ಲಿನ ಟಿಳಕವಾಡಿಯ ಆರ್‌ಪಿಡಿ ಕ್ರಾಸ್‌ ಬಳಿಯ ಎರಡು ಅಂಗಡಿಗಳ ಮೇಲೆ ಪೊಲೀಸರು ಬುಧವಾರ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಇಲ್ಲಿನ ಅನಗೋಳದ ನಿವಾಸಿಗಳಾದ, ಮಂಗಳೂರು ಮೂಲದ ಅಬುಬಕ್ಕರ್‌ ಜೈನಾಭಾ ಸಿದ್ದಿಕ್(31), ಶಬಾಬ್ ಶಖೀಲ್ ಅಹ್ಮದ್‌(22) ಬಂಧಿತರು.

ಅವರಿಂದ ₹ 75,500 ಮೌಲ್ಯದ ವಿವಿಧ ಕಂಪನಿಯ 126 ಹುಕ್ಕಾಗಳು, ₹ 62 ಸಾವಿರ ಮೌಲ್ಯದ ವಿವಿಧ ಕಂಪನಿಯ 51 ರೋಲ್ ಪೇಪರ್, ₹ 15,500 ಮೌಲ್ಯದ 30 ವಿವಿಧ ಕಂಪನಿಯ ಚಾರ್ಕ್‌ಕೋಲ್‌, ₹ 20,300 ಮೌಲ್ಯದ ವಿವಿಧ ಕಂಪನಿಗಳ 120 ಬಾಂಗ್ ಪೈಪ್, ₹ 41,500 ಮೌಲ್ಯದ 25 ಪ್ಯಾಕೆಟ್‌ ವಿದೇಶಿ ಮತ್ತು ದೇಶಿ ಸಿಗರೇಟು, ₹ 25,300 ಮೌಲ್ಯದ ವಿವಿಧ ಕಂಪನಿಯ ತಂಬಾಕಿನ ಪ್ಯಾಕೇಟ್‌ ಮತ್ತು ಬಾಟಲಿಗಳು, ₹ 16,500 ಮೌಲ್ಯದ ವಿವಿಧ ಕಂಪನಿಯ ಪ್ಲೇವರ್ಸ್ ಪ್ಯಾಕೇಟ್‌ ಸೇರಿದಂತೆ ₹ 2,56,600 ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಯಾವುದೇ ಪರವಾನಗಿ ಪಡೆಯದೆ, ನಿಷೇಧಿತ ಉತ್ಪನ್ನಗಳನ್ನು ಹೊರರಾಜ್ಯಗಳಿಂದ ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಅದನ್ನು ಆಧರಿಸಿ, ಟಿಳಕವಾಡಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT