ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರ್ಲಾಪುರ: ಜ.1ರಿಂದ ದುರ್ಗಾದೇವಿ ಜಾತ್ರೆ 

Published 31 ಡಿಸೆಂಬರ್ 2023, 16:25 IST
Last Updated 31 ಡಿಸೆಂಬರ್ 2023, 16:25 IST
ಅಕ್ಷರ ಗಾತ್ರ

ಗುರ್ಲಾಪುರ (ಮೂಡಲಗಿ) : ಸಮೀಪದ ಇಟನಾಳ ದುರ್ಗಾದೇವಿ ಜಾತ್ರೆ ಜ.1ರಿಂದ 5ರ ವರೆಗೆ ಜರುಗಲಿದೆ.

ಜ.1ರಂದು ಬೆಳಿಗ್ಗೆ 6.30ಕ್ಕೆ ಚನ್ನಯ್ಯ ಹಿರೇಮಠ ಇವರಿಂದ ಓಂ ಪೂಜೆ, ಬೆಳಿಗ್ಗೆ 9.30ಕ್ಕೆ ದುರ್ಗಾದೇವಿ ಮೂರ್ತಿ ಅಭಿಷೇಕ, ಬೆಳಿಗ್ಗೆ 10.30ಕ್ಕೆ 101 ಮಹಿಳೆಯರಿಂದ ಕುಂಭಮೇಳ ಜರುಗುವುದು. ಸಂಜೆ 5.30ಕ್ಕೆ ಮುಗಳಖೋಡ ದುರ್ಗದೇವಿ ಗಾಯನ ಸಂಘ ಮತ್ತು ಯರಗಟ್ಟಿಯ ಸದಾಶಿವ ಗಾಯನ ಸಂಘದವರಿಂದ ಹರದೇಶಿ, ನಾಗೇಶಿ ಚೌಡಿಕ ಪದಗಳು ಜರುಗಲಿವೆ.

ಜ.2ರಂದು ಬೆಳಿಗ್ಗೆ 10.30ಕ್ಕೆ ಬಂಡಿಗಣಿಯ ದಾನೇಶ್ವರ ಶ್ರೀಗಳು ಮತ್ತು ಇಟನಾಳ ಗ್ರಾಮದ ಸಿದ್ಧೇಶ್ವರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಆಧ್ಯಾತ್ಮಿಕ ಕಾರ್ಯಕ್ರಮ ಜರುಗುವುದು.  ಜ.3ರಂದು ರಾತ್ರಿ 6ಕ್ಕೆ ಶಾಲಾ ಮಕ್ಕಳಿಂದ ಮನರಂಜನೆ, ಜ.4ರಂದು ಬೆಳಿಗ್ಗೆ 9.15ಕ್ಕೆ ದುರ್ಗಾದೇವಿ ಮತ್ತು ಮಹಾಲಕ್ಷ್ಮಿದೇವಿ ಪಾದಪೂಜೆ ನೆರವೇರುವುದು. ಜ.5ರಂದು ಬೆಳಿಗ್ಗೆ 9.15ಕ್ಕೆ ದುರ್ಗಾದೇವಿ ಪಲ್ಲಕ್ಕಿ ಉತ್ಸವ ಜರುಗುವುದು. ರಾತ್ರಿ 9.30ಕ್ಕೆ ಪರಸು ಕೋಲೂರ ಅವರಿಂದ ರಸಮಂಜರಿ ಇರುವುದು ಎಂದು ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT