ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ಅತ್ಯಾಕರ್ಷಕ ಆಭರಣಗಳ ಪ್ರದರ್ಶನ, ಮಾರಾಟ

Published 25 ನವೆಂಬರ್ 2023, 6:55 IST
Last Updated 25 ನವೆಂಬರ್ 2023, 6:55 IST
ಅಕ್ಷರ ಗಾತ್ರ

ಬೆಳಗಾವಿ: ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್‌ನಿಂದ ನಗರದ ಯುಕೆ–27 ಫೆರ್ನ್‌ನಲ್ಲಿ ಆಯೋಜಿಸಿದ ವಿಶೇಷ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಶಾಸಕ ಆಸೀಫ್‌ ಸೇಠ್‌ ಶುಕ್ರವಾರ ಉದ್ಘಾಟಿಸಿದರು.

ನಂತರ ಆಭರಣಗಳನ್ನು ಆಸಕ್ತಿಯಿಂದ ವೀಕ್ಷಿಸಿದ ಅವರು ಸಂತಸಪಟ್ಟರು. ಬೆಳಗಾವಿಯ ಗ್ರಾಹಕರಿಗಾಗಿಯೇ ವಿಶೇಷವಾಗಿ ಸಂಗ್ರಹಿಸಿದ, ಸಾಂಪ್ರದಾಯಿಕ ಮತ್ತು ಸಮಕಾಲೀನ ಸೃಷ್ಟಿಗಳ ಸಂಗ್ರಹವನ್ನು ಕಂಡು ಖುಷಿಪಟ್ಟರು. ವಿಶಿಷ್ಟ ಶೈಲಿ, ಅತ್ಯಾಕರ್ಷಕ ಮಾಟ, ಕರಕುಶಲತೆ ಈ ಆಭರಣಗಳಲ್ಲಿದೆ. ನ.26ರವರೆಗೆ ಈ ಪ್ರದರ್ಶನ ಸಾರ್ವಜನಿಕರಿಗೆ ತೆರೆದಿರುತ್ತದೆ.

ಸಿ.ಕೃಷ್ಣಯ್ಯ ಚೆಟ್ಟಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ  ಚೈತನ್ಯ ವಿ. ಕೋಥಾ ಮಾತನಾಡಿ, ‘ಈ ಆಭರಣ ಪ್ರದರ್ಶನ ಅತ್ಯಂತ ವಿಶಿಷ್ಟವಾಗಿದೆ. ಪಾರಂಪರಿಕ ಶೈಲಿ, ಆಧುನಿಕ ಕುಶಲತೆಯೊಂದಿಗೆ ಅದ್ಧೂರಿಯಾಗಿ ಕಾಣಿಸುವ ವಸ್ತುಗಳನ್ನು ಆನಂದಿಸಬಹುದು. ಬೆಳ್ಳಿಯ ವಸ್ತುಗಳ ಮೇಲೆ ಶೇ2, ಚಿನ್ನದ ಮೇಲೆ ಶೇ 4, ವಜ್ರದ ಮೇಲೆ ಶೇ6  ಮತ್ತು ₹18.69 ಲಕ್ಷ ಮೌಲ್ಯದ ವಜ್ರದ ಮೇಲೆ ಶೇ9ರಷ್ಟು ರಿಯಾಯಿತಿ ಪಡೆಯಬಹುದು’ ಎಂದರು.

ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್‌ ಹೊಸ ಶೈಲಿಯ, ಅವರವರ ವ್ಯಕ್ತಿತ್ವಕ್ಕೆ ಸರಿ ಹೊಂದುವ ಅಪರೂಪದ ಆಭರಣಗಳನ್ನು ಪ್ರದರ್ಶಿಸಿದೆ. ಆಭರಣಗಳು ಆಕರ್ಷಕ ಶೈಲಿಯ ಜೊತೆಗೆ ಸೂಕ್ಷ್ಮವಾದ ವಜ್ರಗಳೊಂದಿಗೆ, ವೈಡೂರ್ಯ, ಹವಳ, ಮುತ್ತುಗಳು, ಮಾಣಿಕ್ಯಗಳಂತಹ ಅಪರೂಪದ ರತ್ನಗಳೊಂದಿಗೆ ವಿನ್ಯಾಸ ಹೊಂದಿವೆ. ವಿಶಿಷ್ಟ ಆಲಂಕಾರಿಕ ಬೆಳ್ಳಿಯ ವಸ್ತುಗಳೂ ಇಲ್ಲಿ ಗಮನ ಸೆಳೆಯುತ್ತವೆ. ಕೈಗೆಟಕುವ ದರದಲ್ಲಿ ಲಭ್ಯ ಇವೆ.

ಬೆಂಗಳೂರಿನ 150 ವರ್ಷದ ಪರಂಪರೆಯ ಐಷಾರಾಮಿ ಆಭರಣ ಬ್ರ್ಯಾಂಡ್‌ ಅನ್ನು ಈ ಪ್ರದರ್ಶನದಲ್ಲಿ ಕಾಣಬಹುದು. 24 ಕ್ಯಾರೆಟ್‌ ಚಿನ್ನದಿಂದ ತುಂಬಿದ ಅಪರೂಪದ ವಸ್ತುಗಳಿವೆ. ಮಳಿಗೆ ಮಾತ್ರವಲ್ಲದೇ www.ckcjewellers.com/ Rare- scents ಈ ಜಾಲತಾಣದಲ್ಲಿ ಕೂಡ ನೋಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT