ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಸೇವೆಯಿಂದ ಗುರುವಿನ ಕೃಪೆ’

Published 9 ಮಾರ್ಚ್ 2024, 5:10 IST
Last Updated 9 ಮಾರ್ಚ್ 2024, 5:10 IST
ಅಕ್ಷರ ಗಾತ್ರ

ಐಗಳಿ: ‘ಗುರುವಿನ ಸೇವೆ ಮಾಡುವುದರಿಂದ ಗುರು ಕೃಪೆ ದೊರೆಯಲು ಸಾಧ್ಯ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದು ನಿಮ್ಮ ಸುಂದರ ಬದುಕನ್ನು ರೂಪಿಸಿಕೊಳ್ಳಿ’ ಎಂದು ಯಲ್ಲಟ್ಟಿಯ ಸ.ಸ. ರಾಮಕೃಷ್ಣ ಮಹಾರಾಜರು ಹೇಳಿದರು.

ಗ್ರಾಮದಲ್ಲಿ ಶುಕ್ರವಾರ ನಡೆದ ನರಸಿಂಹೇಶ್ವರ ಮಹಾರಾಜರ 45ನೇ ನಾಮಸಪ್ತಾಹ ಹಾಗೂ ನಿವೃತ್ತ ಸೈನಿಕ, ಶಿಕ್ಷಕ, ರೈತರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನರಸಿಂಹೇಶ್ವರ ಮಹಾರಾಜರು ಒಬ್ಬ ವ್ಯಕ್ತಿಯಲ್ಲ; ಶಕ್ತಿ. ಅವರ ಮೇಲೆ ನಂಬಿಕೆ ಇಟ್ಟು ಅವರನ್ನು ಆರಾಧಿಸಿದರೆ ನೀವು ಇಟ್ಟ ಗುರಿ ತಲುಪಲು ಸಾಧ್ಯ. ಕುಲಕರ್ಣಿ ಸಹೋದರರು ಮೂರು ಜನರನ್ನು ಗುರುತಿಸಿ ಅವರನ್ನು ಗೌರವಿಸಿದ್ದು ಮಾದರಿಯಾಗಿದೆ’ ಎಂದರು.

ನಿವೃತ್ತ ಸೈನಿಕ ಸಂಗಪ್ಪ ನಾಗಮೋತಿ, ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿಂಗನಗೌಡ ಪಾಟೀಲ, ಕೃಷಿಕ ಹಣಮಂತ ಕರಿಗಾರ ಅವರನ್ನು ಮಹಾರಾಜರು ಹಾಗೂ ಕುಲಕರ್ಣಿ ಸಹೋದರರು ಸನ್ಮಾನಿಸಿದರು.

ನಿಂಗರಾಜ ಮಹಾರಾಜ, ಚೈತನ್ಯ ಮಹಾರಾಜ, ಹೊನವಾಡದ ಬಾಬುರಾವ ಮಹಾರಾಜ, ಸೋಪಾನ ಮಹಾರಾಜ ಅವರು ಮಾತನಾಡಿದರು. ಭಾಗ್ಯೋದಯ ಮಹಾರಾಜ ಅವರು ದಾಸ ಭೋದೆ ವಾಚನ ಮಾಡಿದರು. ಸುಧೀರ ಕುಲಕರ್ಣಿ ದಂಪತಿ ಗದ್ದುಗೆ ಪೂಜೆ ನೆರವೇರಿಸಿದರು. ಕೃಷ್ಣಾಜಿ ಕುಲಕರ್ಣಿ, ಡಾ.ನರಸಿಂಹ ಕುಲಕರ್ಣಿ, ಡಾ.ವಾಸುದೇವ ನೇಮಗೌಡ, ರಾಮೇಶ್ವರ ಕುಲಕರ್ಣಿ, ಜಗನ್ನಾಥ ಕುಲಕರ್ಣಿ, ಸಿದ್ರಾಮ ಸಿಂಧೂರ, ಸಿದಗೌಡ ಪಾಟೀಲ, ಸಿದಗೌಡ ನೇಮಗೌಡ, ರಾಮೇಶ್ವರ ಕುಲಕರ್ಣಿ ಇದ್ದರು.

ಮಲಗೌಡ ಪಾಟೀಲ ಸ್ವಾಗತಿಸಿದರು. ಕೇದಾರಿಗೌಡ ಬಿರಾದಾರ ವಂದಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT