ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲಹೊಂಗಲ |'ರೈತರ ಬದುಕು ಹಸನಾದರೆ ದೇಶ ಬಲಿಷ್ಠ'

ಬೃಹತ್ ಕೃಷಿಮೇಳ, ಜಾನುವಾರ ಜಾತ್ರೆಗೆ ಚಾಲನೆ
Published 6 ಡಿಸೆಂಬರ್ 2023, 13:10 IST
Last Updated 6 ಡಿಸೆಂಬರ್ 2023, 13:10 IST
ಅಕ್ಷರ ಗಾತ್ರ

ಬೈಲಹೊಂಗಲ: ‘ಸರ್ಕಾರಗಳು ರೈತರಿಗೆ ಬೆನ್ನೆಲುಬು ಆಗಿ ನಿಲ್ಲುವಂತ ಕೆಲಸ ಮಾಡಿದಾಗ ಮಾತ್ರ ರೈತರ ಬದಕು ಹಸನಾಗಲು ಹಾಗೂ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಿದೆ’ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.

ಪಟ್ಟಣದ ಈಶಪ್ರಭು ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ನಾಡಿನ ಸಮಸ್ತ ರೈತರು, ಈಶಪ್ರಭು ಕೃಷಿ ಉತ್ಪನ್ನ ಮಾರಕಟ್ಟೆ ಸಮಿತಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆ, ಕೃಷಿಕ ಸಮಾಜ, ಕೃಷಿಕ ಪರಿಕರ ಮಾರಾಟಗಾರರ ಸಂಘದ ವತಿಯಿಂದ ಮಂಗಳವಾರ ಆರಂಭಗೊಂಡ ಬೃಹತ್ ಕೃಷಿಮೇಳ ಹಾಗೂ ಭಾರೀ ಜಾನುವಾರು ಜಾತ್ರೆ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕೃಷಿ ಪದ್ಧತಿ ಜೀವನದಲ್ಲಿ ಬಹಳ ಮುಖ್ಯವಾಗಿದೆ. ಕೃಷಿ ಪ್ರಧಾನ ಆಗಿರುವ ದೇಶ ನಮ್ಮದಿದೆ. ಆದರೂ ಕೃಷಿಕರಿಗೆ ಹೆಚ್ಚಿನ ಸೌಕರ್ಯ ಒದಗಿಸಲು, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ದಿನೇ, ದಿನೇ ಕೃಷಿ ಉತ್ಪನ್ನ ಭೂಮಿಗಳು ಕಡಿಮೆ ಆಗುತ್ತಿವೆ. ಉದ್ಯಮಗಳು, ಜನಸಂಖ್ಯೆ ಹೆಚ್ಚಾಗುತ್ತಿದೆ. ಕೃಷಿ ಭೂಮಿ‌ ಕಡಿಮೆ ಆಗಿ ಜನ ಸಂಖ್ಯೆ ಹೆಚ್ಚಾದರೂ ರೈತರಿಗೆ, ದೇಶದ ಜನರಿಗೆ ಯಾವುದೇ ರೀತಿಯಲ್ಲಿ ಕಡಿಮೆ ಆಗದಂತೆ, ಇರುವ ಜಮೀನುಗಳಲ್ಲಿ ರೈತರು ಹೆಚ್ವು ಉಳುಮೆ ನೀಡಿ ದೇಶದ ಜನರಿಗೆ ಅನ್ನ ನೀಡುತ್ತಿದ್ದಾರೆ’ ಎಂದರು.

ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆವಹಿಸಿದ್ದರು. ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಪ್ರಭಾ ಅಕ್ಕ ಸಾನ್ನಿಧ್ಯ ವಹಿಸಿದ್ದರು.

ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ಡಾ ವಿಶ್ವನಾಥ ಪಾಟೀಲ, ಕೃಷಿಮೇಳ ಅಧ್ಯಕ್ಷ ಶಿವರಂಜನ ಬೋಳನ್ನವರ, ಜಾನುವಾರ ಮೇಳ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಸಂಗೊಳ್ಳಿ ರಾಯಣ್ಣ ಸಮಿತಿ ಅಧ್ಯಕ್ಷ ಸೋಮನಾಥ ಸೊಪ್ಪಿಮಠ, ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಆರ್.ಪಾಟೀಲ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಗುರು ಮೆಟಗುಡ್ಡ, ನಿವೃತ್ತ ಕುಲಪತಿ ಶಿವಾನಂದ ಹೊಸಮನಿ, ಮಹಾಂತೇಶ ಮತ್ತಿಕೊಪ್ಪ, ಸಿ.ಕೆ.ಮೆಕ್ಕೇದ, ಶ್ರೀಶೈಲ ಯಡಳ್ಳಿ, ಮುರಗೇಶ ಗುಂಡ್ಲುರ, ಮಹೇಶ ಬೆಲ್ಲದ, ಬಿ.ಬಿ.ಗಣಾಚಾರಿ, ಡಾ.ಸಿ.ಬಿ.ಗಣಾಚಾರಿ, ಬಾಬುಸಾಬ ಸುತಗಟ್ಟಿ, ಸುಭಾಸ ತುರಮರಿ, ಎಪಿಎಂಸಿ ಕಾರ್ಯದರ್ಶಿ ಎಸ್.ಎಸ್. ಅರಳಿಕಟ್ಟಿ ಇದ್ದರು.

ಮಹಾಂತೇಶ ತುರಮರಿ, ಬಸವರಾಜ ಭರಮ್ಮನ್ಮವರ ನಿರೂಪಣೆ ಮಾಡಿದರು. ಬಸವರಾಜ ಜನ್ಮಟ್ಟಿ ಸ್ವಾಗತಿಸಿದರು. ಎಫ್.ಎಸ್. ಸಿದ್ದನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬೈಲಹೊಂಗಲ ಎಪಿಎಂಸಿ ಆವರಣದಲ್ಲಿ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಆರಂಭಗೊಂಡ ಕೃಷಿಮೇಳ ಜಾನುವಾರ ಜಾತ್ರೆಯನ್ನು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ರಬಿನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಪ್ರಭುನೀಲಕಂಠ ಸ್ವಾಮೀಜಿ ಶಾಸಕ ಮಹಾಂತೇಶ ಕೌಜಲಗಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅನೇಕರು ಇದ್ದರು.

ಬೈಲಹೊಂಗಲ ಎಪಿಎಂಸಿ ಆವರಣದಲ್ಲಿ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಆರಂಭಗೊಂಡ ಕೃಷಿಮೇಳ ಜಾನುವಾರ ಜಾತ್ರೆ ಸಮಾರಂಭವನ್ನು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಉದ್ಘಾಟಿಸಿದರು. ಪ್ರಭುನೀಲಕಂಠ ಸ್ವಾಮೀಜಿ ಶಾಸಕ ಮಹಾಂತೇಶ ಕೌಜಲಗಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅನೇಕರು ಇದ್ದರು.

ಬೈಲಹೊಂಗಲ ಕೃಷಿಮೇಳ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು
ಬೈಲಹೊಂಗಲ ಕೃಷಿಮೇಳ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು

200 ಕ್ಕೂ ಹೆಚ್ಚು ಮಳಿಗೆಗಳ ಪ್ರದರ್ಶನ ಆಕರ್ಷಕ ಕೃಷಿಮೇಳಕ್ಕೆ ಮೆಚ್ಚುಗೆ ಕೃಷಿ ಪದ್ಧತಿ‌ ಜೀವಂತವಾಗಿರಿಸಲು ಸಲಹೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT