ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಕಷ್ಟದಲ್ಲಿ ಭಾಗಿಯಾಗುವೆ: ಪ್ರಿಯಂಕಾ ಜಾರಕಿಹೊಳಿ

Published 21 ಏಪ್ರಿಲ್ 2024, 14:37 IST
Last Updated 21 ಏಪ್ರಿಲ್ 2024, 14:37 IST
ಅಕ್ಷರ ಗಾತ್ರ

ರಾಯಬಾಗ: ‘ಕಷ್ಟದ ಕಾಲದಲ್ಲಿ ಸಂಸದರು ಬಂದಿಲ್ಲ.‌ ನಿಮ್ಮಿಂದ ಮತ ಪಡೆದುಕೊಂಡು ಹೋಗಿ ಐದು ವರ್ಷದ ನಂತರ ಮತ್ತೆ ಮತ ಕೇಳಲು ಬಂದಿದ್ದಾರೆ. ಈ ಬಗ್ಗೆ ಜನರೇ ಅವರಿಗೆ ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ಉತ್ತರ‌ ನೀಡಬೇಕು’ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ನಾನು ನಿಮ್ಮ ಕಷ್ಟದಲ್ಲಿ ಭಾಗಿಯಾಗುತ್ತೇನೆ. ಯಾವುದೇ‌ ಅನುಮಾನ ಬೇಡ. ಹಾಗಾಗಿ ಕಾಂಗ್ರೆಸ್ ಬೆಂಬಲಿಸಿರಿ. ಸ್ವಸಹಾಯ ಸಂಘಗಳಿಗೆ ನನ್ನ ಹೊಸ ಯೋಜನೆಗಳಿವೆ. ಆರ್ಥಿಕವಾಗಿ ನಾನು ಮಹಿಳೆಯರನ್ನು ಬಲಪಡಿಸಲು ಕ್ರಮ ಕೈಗೊಳ್ಳಲಿದ್ದೇನೆ. ಹಾಗಾಗಿ ನನ್ನನ್ನು ಗೆಲ್ಲಿಸಲ್ಲಿಸಿ’ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ಮಹಾವೀರ ಮೊಹಿತೆ ಮಾತನಾಡಿ, ‘ಗ್ಯಾರಂಟಿ ಯೋಜನೆಗಳು ಚುನಾವಣೆ ಆದನಂತರ ಯಾವುದು ಬಂದ್ ಅಗುವುದಿಲ್ಲ. ಉಹಾಪೋಹಗಳಿಗೆ ಜನರು ತಲೆಗೆಡಸಿಕೊಳ್ಳಬೇಡಿ. ಕಾಂಗ್ರೆಸ್ ಜನರನ್ನು ಯಾವತ್ತೂ ಕೈ ಬಿಡುವುದಿಲ್ಲ’ ಎಂದರು.

ಸದಾಶಿವ ದೇಸಿಂಗೆ, ನಿರ್ಮಲಾ ಪಾಟೀಲ, ಜಯಶ್ರೀ ಮೋಹಿತೆ, ಅಣ್ಣಾಸಾಹೇಬ್ ಭುವಿ, ಯೂನುಸ್ ಅತ್ತಾರ, ಬಾಹುಸಾಹೇಬ ಪಾಟೀಲ, ರಾಕೇಶ ಕಾಂಬಳೆ, ನಾಮದೇವ ಕಾಂಬಳೆ, ದಿಲೀಪ ಜಮಾದಾರ, ಸಿದ್ದಾರೂಢ ಬಂಡಗರ, ಹಾಜೀ ಮುಲ್ಲಾ, ಶಿವು ಪಾಟೀಲ, ಅಝರುದ್ದಿನ್ ಮುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT