ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗವಾಡ | ಕಾರ್ಖಾನೆಯ ಕಲುಷಿತ ನೀರು ಹೊರ ಬಿಡದಂತೆ ಮನವಿ

Published 19 ಡಿಸೆಂಬರ್ 2023, 14:42 IST
Last Updated 19 ಡಿಸೆಂಬರ್ 2023, 14:42 IST
ಅಕ್ಷರ ಗಾತ್ರ

ಕಾಗವಾಡ: ಶಿರಗುಪ್ಪಿ ಶುಗರ್ ವರ್ಕ್ಸ್ ಸಕ್ಕರೆ ಕಾರ್ಖಾನೆಯ ರಾಸಾಯನಿಕ ಮಿಶ್ರಿತ ಕಲುಷಿತ ನೀರನ್ನು ಶೇಡಬಾಳ ಪಟ್ಟಣದ ಜಮೀನುಗಳಿಗೆ ಬಿಡದಂತೆ ಜಯಕರ್ನಾಟಕ ಸಂಘಟನೆಯ ಸದಸ್ಯರು ಹಾಗೂ ಸ್ಥಳೀಯ ರೈತರು ಕಾಗವಾಡ ಉಪ ತಹಶೀಲ್ದಾರ್‌ ಅಣ್ಣಾಸಾಹೇಬ ಕೋರೆ ಅವರಿಗೆ ಮನವಿ ಸಲ್ಲಿಸಿದರು.

ಜಯಕರ್ನಾಟಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಮಗದುಮ್ಮ, ಕಳೆದ ನಾಲ್ಕು ವರ್ಷಗಳ ಹಿಂದೆಯೇ ಮನವಿ ನೀಡಿ, ಕಲುಷಿತ ನೀರು ಬಿಡುವ ಪೈಪ್‌ಲೈನ್ ಕಾಮಗಾರಿಯನ್ನು ಬಂದ್‌ ಮಾಡಲಾಗಿತ್ತು. ಈಗ ಮತ್ತೆ ಕಾಮಗಾರಿ ಪ್ರಾರಂಭಿಸಿದ್ದು, ಆ ನೀರಿನಿಂದ ನಮ್ಮ ಜಮೀನುಗಳು ಹಾಳಾಗುತ್ತವೆ. ಸುತ್ತಮುತ್ತಲಿನ ಕುಡಿಯುವ ನೀರು ಮಲಿನಗೊಳ್ಳುತ್ತದೆ. ಹಾಗಾಗಿ ನೀರು ಬಿಡದಂತೆ ತಾಲ್ಲೂಕು ಆಡಳಿತ ಕಟ್ಟು ನಿಟ್ಟಿನ ಆದೇಶ ಹೊರಡಿಸಬೇಕು. ಕ್ರಮವಹಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಶೇಡಬಾಳ ಜಯಕರ್ನಾಟಕ ಸಂಘದ ಅಧ್ಯಕ್ಷ ವಿನೋದ ಕಾಂಬಳೆ,ಅನೀಲ ಹೆರಲೆ, ಆದಿನಾಥ ಲಾಟಕರ, ಸಂಜು ಅಲಾಸೆ, ಸುಕುಮಾರ ಪಾಟೀಲ, ರಾಜು ಅಲಾಸೆ, ಅನೀಲ ಇರಾಜ, ಅಣ್ಣಾಸಾಬ ಪಲ್ಲಕ್ಕಿ, ಸಂತೋಷ ತಳವಾರ, ಮಾರುತಿ ಪಾಟೀಲ, ಬಾಬಾಸಾಬ ಕಾಂಬಳೆ, ಜಗ್ಗು ಮರಾಠೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT