ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಎರಡನೇ ಹಂತದ ರ್‍ಯಾಂಡಮೈಜೇಷನ್‌

ಶೇ 30ರಷ್ಟು ಹೆಚ್ಚುವರಿ ಇವಿಎಂಗಳ ಸಂಗ್ರಹ; ದುರಸ್ತಿ ಕಂಡುಬಂದರೆ ಹೆಚ್ಚುವರಿ ಬಳಕೆಗೆ ಸೂಚನೆ
Published 25 ಏಪ್ರಿಲ್ 2024, 4:19 IST
Last Updated 25 ಏಪ್ರಿಲ್ 2024, 4:19 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮತಗಟ್ಟೆವಾರು ಎಲೆಕ್ಟ್ರಾನಿಕ್‌ ಮತಯಂತ್ರ (ಇವಿಎಂ)ಗಳ ಎರಡನೇ ಹಂತದ ಹಂಚಿಕೆಯನ್ನು ರ್‍ಯಾಂಡಮೈಜೇಷನ್‌ ಮೂಲಕ ಮಾಡಲಾಯಿತು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಬೆಳಗಾವಿ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರ ಉಪಸ್ಥಿತಿಯಲ್ಲಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ರ್‍ಯಾಂಡಮೈಜೇಷನ್ ಪ್ರಕ್ರಿಯೆ ನಡೆಯಿತು.

ಈಗಾಗಲೇ ಮೊದಲ‌ ಹಂತದ ರ್‍ಯಾಂಡಮೈಜೇಷನ್ ಪೂರ್ಣಗೊಳಿಸಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಂಟು ವಿಧಾನಸಭಾ ಕ್ಷೇತ್ರದ ಸ್ಟ್ರಾಂಗ್‌ರೂಮ್‌ಗಳಿಗೆ ಇವಿಎಂಗಳನ್ನು ಕಳಿಸಲಾಗಿದೆ. ಎರಡನೇ ಹಂತದ ರ್‍ಯಾಂಡಮೈಜೇಷನ್ ಮೂಲಕ ಮತಗಟ್ಟೆವಾರು ಕಳಿಸಬೇಕಾದ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ)ಗಳನ್ನು ವಿಂಗಡಿಸಲಾಯಿತು.

ಬಳಿಕ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ, ‘ಇವಿಎಂಗಳನ್ನು ಮಸ್ಟರಿಂಗ್ ದಿನ ಮತಗಟ್ಟೆ ಅಧಿಕಾರಿಗಳ ತಂಡದ ಮೂಲಕ ಆಯಾ ಮತಗಟ್ಟೆಗಳಿಗೆ ಕಳಿಸಲಾಗುವುದು’ ಎಂದರು.

‘ಶೇ 130ರಷ್ಟು ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್‌ ಮತ್ತು ವಿವಿಪ್ಯಾಟ್‌ಗಳನ್ನು ರ್‍ಯಾಂಡಮೈಜೇಷನ್ ಮೂಲಕ ಅಂತಿಮಗೊಳಿಸಲಾಗುತ್ತದೆ. ಶೇ 100ರಷ್ಟು ಮತಯಂತ್ರಗಳು ಮತಗಟ್ಟೆಗಳಿಗೆ ಕಳಿಸಲಾಗುತ್ತದೆ. ಹೆಚ್ಚುವರಿ ಇರುವ ಶೇ 30ರಷ್ಟು ಮತಯಂತ್ರಗಳನ್ನು ಕಾಯ್ದಿರಿಸಲಾಗುತ್ತದೆ. ಮತಗಟ್ಟೆಗಳಿಗೆ ಕಳಿಸಲಾಗಿರುವ ಮತಯಂತ್ರಗಳಲ್ಲಿ ತಾಂತ್ರಿಕ‌ ದೋಷ ಕಂಡುಬಂದಲ್ಲಿ ಕಾಯ್ದಿರಿಸಲಾಗಿರುವ ಮತಯಂತ್ರಗಳನ್ನು ಬಳಕೆ ಮಾಡಲಾಗುತ್ತದೆ’ ಎಂದು ವಿವರಿಸಿದರು.

ಸಾಮಾನ್ಯ ವೀಕ್ಷಕ ಎಂ.ಕೆ.ಅರವಿಂದ ಕುಮಾರ್, ಪೊಲೀಸ್ ವೀಕ್ಷಕ ಪವನ ಕುಮಾರ್, ವೆಚ್ಚ ವೀಕ್ಷಕ ಹರಕ್ರಿಪಾಲ್ ಖಟಾನಾ ಹಾಗೂ ನರಸಿಂಗರಾವ್, ಪೊಲೀಸ್ ಆಯುಕ್ತ ಯಡಾ‌ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ‌ ರೋಹನ್ ಜಗದೀಶ್, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಶುಭಂ ಶುಕ್ಲಾ ಇದ್ದರು.

ಚಿಕೋಡಿ ವರದಿ: ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಮತಗಟ್ಟೆವಾರು ಎಲೆಕ್ಟ್ರಾನಿಕ್ ಮತಯಂತ್ರಗಳ 2ನೇ ಹಂತದ ರ್‍ಯಾಂಡಮೈಜೇಷನ್ ಬುಧವಾರ ನಡೆಯಿತು.

‘ಈ ಹಂತದಲ್ಲಿ 4,547 ಬ್ಯಾಲೆಟ್ ಯೂನಿಟ್, 2,461 ಕಂಟ್ರೋಲ್ ಯೂನಿಟ್ ಹಾಗೂ 2461 ವಿ.ವಿ.ಪ್ಯಾಟ್‌ಗಳ ರ್‍ಯಾಂಡಮೈಸೇಷನ್ ಕೈಗೊಳ್ಳಲಾಯಿತು.

ಚುನಾವಣಾಧಿಕಾರಿ ರಾಹುಲ್‌ ಶಿಂಧೆ ಮಾತನಾಡಿದರು. ವೀಕ್ಷಕರು ಹಾಗೂ ವಿವಿಧ ಪಕ್ಷಗಳ ಮುಖಂಡರು ಇದ್ದರು.

ಚಿಕ್ಕೋಡಿಯಲ್ಲಿ ಬುಧವಾರ ಜಿಲ್ಲಾ ಚುನಾವಣಾಧಿಕಾರಿ ರಾಹುಲ್‌ ಶಿಂಧೆ ಅವರು 2ನೇ ಹಂತದ ರ್‍ಯಾಂಡಮೈಜೇಷನ್‌ ನಡೆಸಿದರು
ಚಿಕ್ಕೋಡಿಯಲ್ಲಿ ಬುಧವಾರ ಜಿಲ್ಲಾ ಚುನಾವಣಾಧಿಕಾರಿ ರಾಹುಲ್‌ ಶಿಂಧೆ ಅವರು 2ನೇ ಹಂತದ ರ್‍ಯಾಂಡಮೈಜೇಷನ್‌ ನಡೆಸಿದರು

ಮನೆಗೆ ತೆರಳಿ ಮತ ಸಂಗ್ರಹ

‘ಏ. 25 26 ಹಾಗೂ 27ರಂದು ಮನೆ ಮನೆಗಳಿಗೆ ತೆರಳಿ ಮತ ಸಂಗ್ರಹ ನಡೆಯಲಿದೆ. ಈಗಾಗಲೇ ನಿಗದಿತ ನಮೂನೆ‌ ಭರ್ತಿ‌‌ ಮಾಡುವ ಮೂಲಕ ಮನೆಯಿಂದ‌ ಮತ ಚಲಾವಣೆಗೆ ಒಪ್ಪಿಗೆ ನೀಡಿರುವ 85 ವರ್ಷ ಮೇಲ್ಪಟ್ಟವರು ಹಾಗೂ‌ ಅಂಗವಿಕಲರ ಮತಸಂಗ್ರಹ ಮಾಡಲಾಗುವುದು’ ಎಂದು ಚುನಾವಣಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ‘ಮತ ಸಂಗ್ರಹಿಸುವ ಸಂದರ್ಭದಲ್ಲಿ ರಾಯಕೀಯ ಪಕ್ಷಗಳ ಏಜೆಂಟರು ಉಪಸ್ಥಿತರಿರಬಹುದು. ಆದರೆ ಈ ಬಗ್ಗೆ ಆಯಾ ಪಕ್ಷ ಅಥವಾ ಅಭ್ಯರ್ಥಿಗಳು ಏಜೆಂಟರನ್ನು ನೇಮಿಸಿ ಮುಂಚಿತವಾಗಿ ತಿಳಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT