ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಢನಂಬಿಕೆ ಬಿಟ್ಟು ಜೀವ ಉಳಿಸಿ: ಶಾಸಕ ವಿಶ್ವಾಸ್ ವೈದ್ಯ ಸಲಹೆ

Published 21 ಅಕ್ಟೋಬರ್ 2023, 5:41 IST
Last Updated 21 ಅಕ್ಟೋಬರ್ 2023, 5:41 IST
ಅಕ್ಷರ ಗಾತ್ರ

ಸವದತ್ತಿ: ತಾಲ್ಲೂಕಿನ ಹರಳಕಟ್ಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯತಿಗಳಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.

ಶಿಬಿರಕ್ಕೆ ಚಾಲನೆ ನೀಡಿದ ಶಾಸಕ ವಿಶ್ವಾಸ್ ವೈದ್ಯ ಮಾತನಾಡಿ, ‘ಆರೋಗ್ಯ ಕ್ಷೇತ್ರದಲ್ಲಿ ಅಗಾಧ ಬದಲಾವಣೆಗಳಾಗಿವೆ. ಆದರೆ ರಕ್ತಕ್ಕೆ ಪರ್ಯಾಯ ರಕ್ತವೇ ಆಗಿದೆ. ರಕ್ತದಾನ ಶಿಬಿರಗಳಲ್ಲಿ ಭಾಗಿಯಾಗಿ ಇನ್ನೊಂದು ಜೀವ ಉಳಿಸಲು ಸಹಕರಿಸಿದ ಎಲ್ಲರೂ ಶ್ಲಾಘನಾರ್ಹರು’ ಎಂದು ಹೇಳಿದರು.

‘ಇನ್ನೂ ಬಹುತೇಕರಲ್ಲಿ ರಕ್ತದಾನ ಮಾಡುವ ಕುರಿತು ಮೂಢನಂಬಿಕೆ, ತಪ್ಪು ಕಲ್ಪನೆಗಳಿವೆ. ಆರೋಗ್ಯವಂತರು ಸದೃಢ ಆರೋಗ್ಯ ಹೊಂದಲು ರಕ್ತದಾನ ಅತಿ ಸಹಕಾರಿ. ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆಯಿಂದ ಅದೆಷ್ಟೋ ಸಾವು ಸಂಭವಿಸುತ್ತಿವೆ. ಹೀಗಾಗಿ ರಕ್ತದಾನ ಶಿಬಿರಗಳ ಪ್ರಮಾಣ ಹೆಚ್ಚಲಿ’ ಎಂದು ಹೇಳಿದರು.

ಟಿಎಚ್‌ಒ ಡಾ. ಶ್ರೀಪಾದ್ ಸಬನೀಸ್, ಡಾ. ಸಿದ್ದಪ್ಪ ಕೋರಿಶೆಟ್ಟರ್, ಗ್ರಾಪಂ ಅಧ್ಯಕ್ಷ ಕೃಷ್ಣರಡ್ಡಿ ಸವದತ್ತಿ, ಉಪಾಧ್ಯಕ್ಷೆ ಶಂಕ್ರಮ್ಮ ಹರಳಕಟ್ಟಿ, ಪಿಡಿಒ ಪಿ.ಎನ್. ಕೌಜಲಗಿ, ಬಿಎಚ್‌ಒ ಆರ್.ಎಸ್. ಚಿಟ್ನಿಸ್, ಸುಭಾಸ್ ಹುಜರತ್ತಿ, ಎಸ್.ಎಸ್. ಹಿರೇಮಠ, ಶಿವಶಂಕರ ಭೂಶಣ್ಣವರ, ಮಂಜುನಾಥ ಕೊಪ್ಪಳ, ಮಂಜುಳಾ ತಳವಾರ, ಭಾರತಿ ಗೌಡ, ದ್ಯಾಮವ್ವ ಬಡಿಗೇರ, ಅಮೃತಾ ಬೆಣಚಿನಮರಡಿ, ಈರಣ್ಣ ಅಂತಕ್ನವರ ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT