ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡಲಗಿ: ಕುರುಹಿನಶೆಟ್ಟಿ ಸೊಸೈಟಿಗೆ ₹4.94 ಕೋಟಿ ಲಾಭ

Published 30 ಏಪ್ರಿಲ್ 2024, 15:48 IST
Last Updated 30 ಏಪ್ರಿಲ್ 2024, 15:48 IST
ಅಕ್ಷರ ಗಾತ್ರ

ಮೂಡಲಗಿ: ‘ಮೂಡಲಗಿಯ ಕುರುಹಿನಶೆಟ್ಟಿ ಅರ್ಬನ್‌ ಕೋಆಫ್‌ ಸೊಸೈಟಿಯು 2023–24ನೇ ಆರ್ಥಿಕ ವರ್ಷದ ಕೊನೆಯಲ್ಲಿ ₹4.93 ಕೋಟಿ ನಿವ್ವಳ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದು ಸಂಘದ ಅಧ್ಯಕ್ಷ ಬಿ.ಸಿ. ಮುಗಳಖೋಡ ಹೇಳಿದರು.

ಇಲ್ಲಿಯ ಕುರುಹಿನಶೆಟ್ಟಿಯ ಅರ್ಬನ್‌ ಕೋಆಪ್‌ ಕ್ರೆಡಿಟ್‌ ಸೊಸೈಟಿಯ ಪ್ರಧಾನ ಕಚೇರಿಯಲ್ಲಿ ಸೊಸೈಟಿಯ ಪ್ರಗತಿ ಬಗ್ಗೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶೇರುದಾರರಿಗೆ ಶೇ 15ರಷ್ಟು ಲಾಭಾಂಶವನ್ನು ವಿತರಿಸಿದೆ ಎಂದರು.

‘ಪ್ರಸಕ್ತ ಮಾರ್ಚ್‌ ಅಂತ್ಯಕ್ಕೆ ₹3.90 ಕೋಟಿ ಶೇರು ಬಂಡವಾಳ, ₹230.85 ಕೋಟಿ ಠೇವುಗಳು, ₹22.22 ಕೋಟಿ ನಿಧಿಗಳನ್ನು ಹೊಂದಿದ್ದು, ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿದಾರರ ಭದ್ರತೆಗಾಗಿ ₹77.94 ಕೋಟಿ ಗುಂತಾವಣಿ ಇಡಲಾಗಿದೆ. ವಿವಿಧ ಕ್ಷೇತ್ರ ಜನರಿಗೆ ₹162.42 ಕೋಟಿ ಸಾಲವನ್ನು ವಿತರಿಸಿದೆ. ₹269.40 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ’ ಎಂದರು.

ಸೊಸೈಟಿಯ ನಿರ್ದೇಶಕ ಸುಭಾಷ ಬೆಳಕೂಡ ಮಾತನಾಡಿ, ‘ಸೊಸೈಟಿಯು ಸದ್ಯ 14 ಶಾಖೆಗಳನ್ನು ಹೊಂದಿದ್ದು, ಮುಂದಿನ ತಿಂಗಳದಲ್ಲಿ ರಾಮದುರ್ಗ ತಾಲ್ಲೂಕಿನ ಚಂದರಗಿಯಲ್ಲಿ ಹೊಸ ಶಾಖೆಯನ್ನು ಪ್ರಾರಂಭಿಸಲಾಗುವುದು. ತೇರದಾಳ, ತುಕ್ಕಾನಟ್ಟಿ ಮತ್ತು ರಾಮದುರ್ಗ ಶಾಖೆಗಳ ಸ್ವಂತ ಕಟ್ಟಡಗಳ ಕೆಲಸ ಮುಗಿದಿದ್ದು, ಶೀಘ್ರದಲ್ಲಿ ಉದ್ಘಾಟನೆ ಮಾಡಲಾಗುವುದು’ ಎಂದರು.

ಸೊಸೈಟಿಯ ಉಪಾಧ್ಯಕ್ಷ ಲಕ್ಕಪ್ಪ ಪೂಜೇರಿ, ನಿರ್ದೇಶಕರಾದ ಗೋಡಚೆಪ್ಪ ಮುರಗೋಡ, ಬಿ.ಬಿ. ಬೆಳಕೂಡ, ಇಸ್ಮಾಯಿಲ್ ಕಳ್ಳಿಮನಿ, ವಿಶಾಲ ಶೀಲವಂತ, ಮಾಲಾ ಬೆಳಕೂಡ, ಮಹಾಬೂಬಿ ಕಳ್ಳಿಮನಿ, ಉಮಾ ಬೆಳಕೂಡ, ಶಾಂತವ್ವಾ ಬೋರಗಲ್, ಶಾಲನ್‌ ಕೋಡತೆ, ಪ್ರಧಾನ ವ್ಯವಸ್ಥಾಪಕ ರಮೇಶ ಒಂಟಗೂಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT