ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ 8ರಂದು

Published 6 ಮಾರ್ಚ್ 2024, 7:49 IST
Last Updated 6 ಮಾರ್ಚ್ 2024, 7:49 IST
ಅಕ್ಷರ ಗಾತ್ರ

ಬೆಳಗಾವಿ: ‘ಇಲ್ಲಿನ ಕರ್ನಾಟಕ ಕಾನೂನು ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಎಂ.ಕೆ.ನಂಬಿಯಾರ್ ಸ್ಮರಣಾರ್ಥ ಮಾರ್ಚ್‌ 8ರಿಂದ 10ರವರೆಗೆ ರಾಷ್ಟ್ರಮಟ್ಟದ 14ನೇ ಅಣಕು ನ್ಯಾಯಾಲಯ ಸ್ಪರ್ಧೆ ನಡೆಯಲಿದೆ’ ಎಂದು ಕಾರ್ಯದರ್ಶಿ ವಿವೇಕ ಕುಲಕರ್ಣಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘8ರಂದು ಸಂಜೆ 5.30ಕ್ಕೆ ಕೆಎಲ್‌ಎಸ್‌ ಪ್ಲಾಟಿನಂ ಜ್ಯುಬಿಲಿ ಕಟ್ಟಡದ ಕೆ.ಕೆ.ವೇಣುಗೋಪಾಲ ಆಡಿಟೋರಿಯಂನಲ್ಲಿ ಉದ್ಘಾಟನೆ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಅನಿಲ ಕಟ್ಟಿ ಆಗಮಿಸುವರು. ವಕೀಲ ವಿ.ಜಿ.ಕುಲಕರ್ಣಿ ಅಧ್ಯಕ್ಷತೆ ವಹಿಸುವರು. 10ರಂದು ಸಂಜೆ 4ಕ್ಕೆ ಸಮಾರೋಪ ಕಾರ್ಯಕ್ರಮವಿದ್ದು, ಮುಖ್ಯ ಅತಿಥಿಯಾಗಿ ಹೈಕೋರ್ಟ್‌ನ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಆಗಮಿಸುವರು. ಕರ್ನಾಟಕ ಕಾನೂನು ಸಂಸ್ಥೆಯ ಅಧ್ಯಕ್ಷ ಅನಂತ ಮಂಡಗಿ ಅಧ್ಯಕ್ಷತೆ ವಹಿಸುವರು. ಆಡಳಿತ ಮಂಡಳಿ ಚೇರ್ಮನ್‌ ಪಿ.ಎಸ್‌.ಸಾವಕಾರ ಇರುವರು’ ಎಂದರು.

‘ಗುಜರಾತ್, ಉತ್ತರ ಪ್ರದೇಶ, ಉತ್ತರಾಖಂಡ, ತಮಿಳುನಾಡು, ಗೋವಾ, ಪಂಜಾಬ್, ಮಹಾರಾಷ್ಟ್ರ ಮತ್ತಿತರ ರಾಜ್ಯಗಳ 35 ತಂಡಗಳು ಹಾಗೂ 5 ರಾಷ್ಟ್ರೀಯ ಕಾನೂನು ಶಾಲೆಗಳ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಕಾನೂನು ಪರಿಣತರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ವಿವಿಧ ವಿಭಾಗಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ₹1,35,000 ಮೌಲ್ಯದ ಪ್ರಶಸ್ತಿಗಳನ್ನು ನೀಡಲಾಗುವುದು’ ಎಂದರು.

ಸಂಸ್ಥೆಯ ಸದಸ್ಯ ಆರ್.ಎಸ್‌.ಮುತಾಲಿಕ, ಎಸ್‌.ವಿ.ಗಣಾಚಾರಿ, ವಿ.ಎಂ.ದೇಶಪಾಂಡೆ, ಎ.ಎಚ್.ಹವಾಲ್ದಾರ, ಸಂಯೋಜಕಿ ಅಶ್ವಿನಿ ಪರಬ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT