ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡಲಗಿ: ಸಿದ್ಧಲಿಂಗೇಶ್ವರ ರಥೋತ್ಸವ ಸಂಭ್ರಮ

Published 6 ಜನವರಿ 2024, 6:46 IST
Last Updated 6 ಜನವರಿ 2024, 6:46 IST
ಅಕ್ಷರ ಗಾತ್ರ

ಮೂಡಲಗಿ: ತಾಲ್ಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮದ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ಜರುಗಿದ ನಿಜಗುಣ ದೇವರ ಷಷ್ಠ್ಯಬ್ಧಿ ಸಂಭ್ರಮ ಮತ್ತು 25ನೇ ಬೃಹತ್ ಸತ್ಸಂಗ ಸಮ್ಮೇಳನದ ಅಂಗವಾಗಿ ನಿಜಗುಣ ದೇವರ ಗುರುಗಳಾದ ಶಿವಾವತಾರಿ ಮಧರಖಂಡಿಯ ಯತಿರಾಜ ಸಿದ್ಧಲಿಂಗೇಶ್ವರ ತೊಟ್ಟಿಲೋತ್ಸವ ಹಾಗೂ ರಥೋತ್ಸವ ವಿಜೃಂಭನೆಯಿಂದ ಜರುಗಿತು.

ರಥೋತ್ಸವದಲ್ಲಿ ನಾಡಿನ ವಿವಿಧೆಡೆಯಿಂದ ಭಾಗವಹಿಸಿದ್ದ ಭಕ್ತರು ರಥಕ್ಕೆ ಹಣ್ಣು, ಹೂವು, ಕಾಯಿಗಳನ್ನು ಅರ್ಪಿಸಿದರು. ಬೆಳಿಗ್ಗೆ ಮೂಲ ಸನ್ನಿಧಿಗೆ ಅಭಿಷೇಕ, ವಿಶೇಷ ಪೂಜೆಗಳು ಜರುಗಿದವು. ಮೂರು ದಿನಗಳ ವರೆಗೆ ಜರುಗಿದ ನಿಜಗುಣ ದೇವರ ಷಷ್ಠ್ಯಬ್ಧಿ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಮಹಾತ್ಮರು ಭಾಗವಹಿಸಿ ಉಪಮದೇಶಾಮೃತವನ್ನು ನೀಡಿದರು.

ನಿಜಗುಣ ದೇವರು ಮಾತನಾಡಿ, ‘ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಮಹಾತ್ಮರು, ಭಕ್ತರಿಂದ ಷಷ್ಠ್ಯಬ್ಧಿ ಕಾರ್ಯಕ್ರಮವು ವೈಶಿಷ್ಟ್ಯಪೂರ್ಣವಾಗಿ ಜರುಗಿತು. ಶ್ರೀಮಠದ ಬೆಳವಣಿಗೆಗೆ ನಿಷ್ಠೆಯನ್ನು ಕಾಯ್ದುಕೊಂಡು ಹೋಗುವೆನು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT