ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಪ್ಯ ಸಭೆ ನಡೆಸಿದ ಸವದಿ– ತಮ್ಮಣ್ಣವರ

Published 7 ಜೂನ್ 2024, 13:54 IST
Last Updated 7 ಜೂನ್ 2024, 13:54 IST
ಅಕ್ಷರ ಗಾತ್ರ

ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಕೆಂಗಣ್ಣಿಗೆ ಗುರಿಯಾಗಿರುವ ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಶುಕ್ರವಾರ ಗೋಪ್ಯ ಮಾತುಕತೆ ನಡೆಸಿದರು.

ಅಥಣಿಯಲ್ಲಿರುವ ಶಾಸಕ ಸವದಿ ಅವರ ಮನೆಗೆ ಭೇಟಿ ನೀಡಿದ ಮಹೇಂದ್ರ ತಮ್ಮಣ್ಣವರ ಅವರು ಸುದೀರ್ಘ ಚರ್ಚೆ ನಡೆಸಿದರು. ಬಿಜೆಪಿಯಲ್ಲಿದ್ದ ಇಬ್ಬರೂ ಕಾಂಗ್ರೆಸ್‌ ಸೇರಿದ ಬಳಿಕ ಶಾಸಕರಾದವರು. ಆದರೆ, ಈ ಭೇಟಿಯ ಉದ್ದೇಶ ಹಾಗೂ ಚರ್ಚೆಯ ವಿಷಯಗಳನ್ನು ಇಬ್ಬರೂ ಬಹಿರಂಗ ಪಡಿಸಲಿಲ್ಲ.

‘ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿಗೆ ಅಥಣಿ ಮತ್ತು ಕುಡಚಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಡಿಮೆ ಮತಗಳು ಬಂದಿವೆ. ಅಲ್ಲಿನ ಇಬ್ಬರೂ ಶಾಸಕರು ಪಕ್ಷದ ಪರವಾಗಿ ನಡೆದುಕೊಂಡಿಲ್ಲ’ ಎಂದು ಸತೀಶ ಜಾರಕಿಹೊಳಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸವದಿ, ‘ಸತೀಶ ಅವರ ಆರೋಪಗಳಿಗೆ ನಂತರ ಉತ್ತರಿಸುವೆ’ ಎಂದರು.

ಹತ್ತಿರವಾಗುವ ಅವಕಾಶ ಕಳಕೊಂಡಿದ್ದಾರೆ:

‘ಶಾಸಕ ಲಕ್ಷ್ಮಣ ಸವದಿ ಮತ್ತು ನಾವು ಇನ್ನಷ್ಟು ಹತ್ತಿರವಾಗಲು ಈ ಚುನಾವಣೆಯಲ್ಲಿ ಅವಕಾಶವಿತ್ತು. ಅವರು ಅದನ್ನೂ ಕಳೆದುಕೊಂಡಿದ್ದಾರೆ. ನಾನು ಯಾರ ಬಗ್ಗೆಯೂ ಹೈಕಮಾಂಡ್‌ಗೆ ದೂರು ನೀಡುವುದಿಲ್ಲ. ಅವರ ತಪ್ಪನ್ನು ಜನರ ಮುಂದೆ ಇಡುವೆ’ ಎಂದು ಸಚಿವ ಸತೀಶ ಜಾರಕಿಹೊಳಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

‘ಇಬ್ಬರೂ ಶಾಸಕರು ಒಂದಾಗಿ ಬಿಜೆ‍ಪಿಗೆ ಹೋಗುತ್ತಾರೋ, ಬಿಡುತ್ತಾರೋ ನನಗೆ ಗೊತ್ತಿಲ್ಲ. ಅವರನ್ನೇ ಕೇಳಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಾವು ಚಿಕ್ಕೋಡಿ ಕ್ಷೇತ್ರದಲ್ಲಿನ ಬೇರು ಅರ್ಥ ಮಾಡಿಕೊಂಡಿದ್ದರಿಂದ ಗೆಲುವಾಗಿದೆ. ಆದರೆ, ಕೆಲವರು ಕೇರಳ ಮತ್ತು ನೇಪಾಳಕ್ಕೆ ಹೋಗಿ ಪೂಜೆ ಮಾಡಿಸಿದರೂ ಸೋಲಾಗಿದೆ. ಅಭ್ಯರ್ಥಿ, ಪ್ರಚಾರಕರು, ಬೆಂಬಲಿಗರು ಎಲ್ಲ ಸರಿಯಾಗಿ ಕೆಲಸ ಮಾಡಿದರೆ ಗೆಲುವಾಗುತ್ತದೆ. ಪೂಜೆ ಮಾಡಿಸಿದರೆ ಅಲ್ಲ’ ಎಂದೂ ಅವರು ಪರೋಕ್ಷವಾಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT