ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಮಕನಮರಡಿ | ಕೋಳಿ ಫಾರ್ಮ್‌: ನೋಣಗಳ ಹಾವಳಿಯಿಂದ ಬೇಸತ್ತ ಜನ

ಊಟ ಮಾಡುವಾಗಲೆಲ್ಲ ತಟ್ಟೆಯಲ್ಲಿ ಬೀಳುವ ನೋಣ
Published 30 ಮೇ 2024, 15:54 IST
Last Updated 30 ಮೇ 2024, 15:54 IST
ಅಕ್ಷರ ಗಾತ್ರ

ಯಮಕನಮರಡಿ: ಹುಕ್ಕೇರಿ ತಾಲ್ಲೂಕಿನ ನಾಗನೂರ ಕೆ.ಎಂ ಮತ್ತು ಕೆ.ಡಿ ಗ್ರಾಮಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೋಣಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಜನರು ಬೇಸತ್ತಿದ್ದಾರೆ.

ಗ್ರಾಮದ ಹೊರವಲಯದಲ್ಲಿ 300 ಮೀಟರ್ ಅಂತರದಲ್ಲಿ 10 ಕೋಳಿ ಫಾರ್ಮ್‌ ಇವೆ. ಇಲ್ಲಿಂದಲೇ ಗ್ರಾಮಕ್ಕೆ ನೋಣಗಳು ಬಂದಿವೆ. ಗ್ರಾಮದ ಮನೆಗಳಲ್ಲಿ ಊಟ ಮಾಡುವಾಗಲೆಲ್ಲ ತಟ್ಟೆಯಲ್ಲಿ ನೋಣಗಳ ಬೀಳುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದರು.

ನಾಗನೂರ ಕೆ.ಎಂ.ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮೇ 29ರಿಂದ ಆರಂಭವಾಗಿದೆ. ನೂರಾರು ಮಕ್ಕಳು ಮಧ್ಯಾಹ್ನದ ಬಿಸಿಯೂಟ ಮಾಡುತ್ತಾರೆ. 100ಮೀಟರ್ ಅಂತರದಲ್ಲಿ ಸರ್ಕಾರಿ ಪೌಢ ಶಾಲೆ, ಕೆಎಂಎಫ್ ಹಾಲಿನ ಡೇರಿ ಇದ್ದು, ಸಂಘಗಳು, ಗ್ರಾಮ ಪಂಚಾಯ್ತಿ, ತಲಾಟಿ ಕಚೇರಿ ಇರುವುದರಿಂದ ನಿತ್ಯ ಸಾವಿರಾರು ಜನ ಸಂಚರಿಸುವುದರಿಂದ ಅವರ ಆರೊಗ್ಯದ ಮೇಲೆ ಗಂಭೀರ ಪರಿಣಾಮಗಳಾಗುವ ಸಾಧ್ಯತೆಗಳಿವೆ. 

ವಾರದೊಳಗೆ ಕೋಳಿ ಫಾರ್ಮ್‌ ಅನ್ನು ಸ್ಥಗಿತಗೊಳಿಸದಿದ್ದರೆ ಫಾರ್ಮ ಮೇಲೆ ದಾಳಿ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ತಿಂಗಳ ಹಿಂದೆ ಗ್ರಾ.ಪಂ, ತಾಲ್ಲೂಕು ಪಂಚಾಯ್ತಿ, ತಲಾಟಿ ಹಾಗೂ ಹುಕ್ಕೇರಿ ತಹಶೀಲ್ದಾರ್‌ ಕಚೇರಿಗಳಿಗೆ ಮನವಿ ನೀಡಿದ್ದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ನಾಗನೂರ ಕೆ.ಡಿ ಗ್ರಾಮಸ್ಥರಾದ ಶಿವಲಿಂಗ ಅಗಸರ, ಭೈರಪ್ಪಾ ಬಾನಿ, ಕಿರಣ ದೇಸಾಯಿ, ಆನಂದ ಸಂಕವ್ವಗೋಳ, ರಾಜು ಬಾನಿ, ಕಲ್ಲಪ್ಪ ಬಡಿಗೇರ, ಮಾರುತಿ ಅಗಸರ  ಆರೋಪಿಸಿದ್ದಾರೆ.

‘ಸೊಳ್ಳೆ ಹಾಗೂ ನೋಣಗಳ  ಹತೋಟಿಗೆ ಡಿಡಿಟಿ ಔಷಧ ಸಿಂಪರಣೆ ಮಾಡಲು ಗ್ರಾಮ ಪಂಚಾಯ್ತಿಗೆ  ಪತ್ರ ಬರೆಯಲಾಗಿದೆ’ ಎಂದು ದಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಸೀಮಾ ಢಂಗ ತಿಳಿಸಿದರು.

‘ಗ್ರಾಮದಲ್ಲಿನ ಗಟಾರ, ನೀರು ಸಂಗ್ರಹ ತೊಟ್ಟಿ, ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ ಎಂದು ಡಂಗೂರ ಸಾರಲಾಗಿದೆ. ಕೋಳಿ ಫಾರ್ಮ್‌ಗೆ ನೋಟಿಸ್‌ ನೀಡಲಾಗಿದೆ. ಹುಕ್ಕೇರಿ ತಹಶೀಲ್ದಾರ್‌ ಅವರು ಫಾರ್ಮ್‌ಗೆ ಪರವಾನಗಿ ನೀಡಿದ್ದು, ಅವರೇ ಕ್ರಮಕೈಗೊಳ್ಳುಬೇಕು. ಸಂಬಂಧಿಸಿದ ಇಲಾಖೆಗೆ ಈ ಬಗ್ಗೆ ಪತ್ರ ಬರೆಲಾಗುವುದು’ ಎಂದು ನಾಗನೂರ ಕೆ.ಡಿ. ಪಿಡಿಒ ಶಿವನಾಯಿಕ ನಾಯಿಕ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT