ವಾಕಥಾನ್: ಹಾಕು ಹೆಜ್ಜೆ ಮುಂದಕ್ಕೆ ಹಾರು ಅಂತರಿಕ್ಷಕ್ಕೆ...

7
ವಿಶ್ವ ಅಂತರಿಕ್ಷ  ಸಪ್ತಾಹದ‌ ಅಂಗವಾಗಿ ವಾಕಥಾನ್

ವಾಕಥಾನ್: ಹಾಕು ಹೆಜ್ಜೆ ಮುಂದಕ್ಕೆ ಹಾರು ಅಂತರಿಕ್ಷಕ್ಕೆ...

Published:
Updated:

ಬಳ್ಳಾರಿ: ಹಾಕು ಹೆಜ್ಜೆ ಮುಂದಕ್ಕೆ ಹಾರು ಅಂತರಿಕ್ಷಕ್ಕೆ..., ಇಸ್ರೋ ಈಸ್ ಫಾರ್ ನೇಷನ್, ಸೆಟಲೈಟ್ ಈಸ ಫಾರ್ ಕಮ್ಯುನಿಕೇಷನ್, ಸೀ ಟು ದ ಸ್ಕೈ ರೈಸ್ ಟು ದ ‌ಸ್ಕೈ... ಘೋಷಣೆಗಳು ನಗರದಲ್ಲಿ‌ ಭಾನುವಾರ‌ ಬಿಸಿಲೇರುವ ಮುನ್ನವೇ ಮೊಳಗಿದವು..

ವಿಶ್ವ ಅಂತರಿಕ್ಷ  ಸಪ್ತಾಹದ‌ ಅಂಗವಾಗಿ ನಗರದ ಕನಕ ದುರ್ಗಮ್ಮ ಗುಡಿ ಆವರಣದಿಂದ ನಡೆದ ಅಂತರಿಕ್ಷ ವಾಕಥಾನ್ನಲ್ಲಿ ಪಾಲ್ಗೊಂಡ ನೂರಾರು ವಿದ್ಯಾರ್ಥಿಗಳು ಇಂಥ ಹತ್ತಾರು ಘೋಷಣೆ ಗಳನ್ನು ಕೂಗುತ್ತಾ ನಗರದ ಜನರ ‌ಗಮನ ಸೆಳೆದರು.

ಇಸ್ರೋ ಪ್ರಧಾನ ಶಾಖೆಯಾದ ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್ ಏರ್ಪಡಿಸಿರುವ ವಾಕಥಾನ್ ಅನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಉದ್ಘಾಟಿಸಿದರು.

ಸಪ್ತಾಹದ ಅಧ್ಯಕ್ಷ ಜೆ.ಗೋಪಾಲಕೃಷ್ಣ, ಸಪ್ತಾಹಕ್ಕೆ ಸಹಯೋಗ ನೀಡಿರುವ ಬಿಐಟಿಎಂ ಕಾಲೇಜು ಅಧ್ಯಕ್ಷ ಎಸ್‌ಜೆವಿ ಮಹಿಪಾಲ್, ನೋಡಲ್ ಅಧಿಕಾರಿ ಎಂ.ಎ.ಶಕೀಬ್ ನೇತೃತ್ವ ವಹಿಸಿದ್ದರು.

ದುರ್ಗಮ್ಮ ಗುಡಿ ಸೇತುವೆ, ಗಡಿಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಎಚ್.ಆರ್ ಗವಿಯಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಾಕಥಾನ್ ಮುಕ್ತಾಯವಾಯಿತು.

ಕಾಲೇಜಿನ 180 ಹಾಗೂ ಗೃಹರಕ್ಷಕ ದಳದ 100 ಸ್ವಯಂ ಸೇವಕರು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ 10 ಸ್ವಯಂ ಸೇವಕರು ಪಾಲ್ಗೊಂಡರು.

ಬರಹ ಇಷ್ಟವಾಯಿತೆ?

 • 1

  Happy
 • 3

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !