ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ನಡೆಸಿದ 2017ನೇ ಸಾಲಿನ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಗರದ ಎಂ.ವಿ.ಜೆ ಎಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಚಿನ್ನದ ಪದಕ ಗಳಿಸಿದ್ದಾರೆ.

ಬಿ.ಇ ವೈದ್ಯಕೀಯ ಎಲೆಕ್ಟ್ರಾನಿಕ್ಸ್ ವಿಭಾಗದ ಜಾಯ್ಸ್ ಮ್ಯಾಥ್ಯೂ, ಎಂ.ಟೆಕ್ ಏರೋನಾಟಿಕಲ್ ವಿಭಾಗದ ನಾಗರಾಜ್ ನಾಯ್ಕ್ ಹಾಗೂ ಸಾರಿಗೆ ವಿಭಾಗದ ನಂದೀಕೇಶ್ವರ ಸುಲೇಗೋನ್ ಅವರು ಮೊದಲ ರ‍್ಯಾಂಕ್ ಪಡೆದಿದ್ದಾರೆ. ಕಾಲೇಜಿನ ವಿವಿಧ ವಿಭಾಗಗಳ 14 ವಿದ್ಯಾರ್ಥಿಗಳು ಟಾಪ್–10ರಲ್ಲಿ ಸ್ಥಾನ ಪಡೆದಿದ್ದಾರೆ.

ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಹಾನಿರ್ದೇಶಕ ಡಾ. ಭುಜಂಗ ರಾವ್ ಅವರು ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

ಪ್ರಾಂಶುಪಾಲ ಡಾ. ಎನ್.ಗುಣಶೇಖರ್, ‘ಫಲಿತಾಂಶದಲ್ಲಿ ನಮ್ಮ ಕಾಲೇಜಿಗೆ 4ನೇ ಸ್ಥಾನ ಬಂದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.