ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bangalore Rain | ಮೆಟ್ರೊ ಹಳಿಗೆ ಬಿದ್ದ ಮರದ ಕೊಂಬೆ: ಸಂಚಾರ ವ್ಯತ್ಯಯ

Published 2 ಜೂನ್ 2024, 14:40 IST
Last Updated 2 ಜೂನ್ 2024, 14:40 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ನೇರಳೆ ಮಾರ್ಗದಲ್ಲಿ ಟ್ರಿನಿಟಿ ನಿಲ್ದಾಣದ ಬಳಿ ಭಾನುವಾರ ಮಳೆಯಿಂದಾಗಿ ಹಳಿಗೆ ಮರದ ಕೊಂಬೆ ಮುರಿದು ಬಿದ್ದಿದೆ. ಇದರಿಂದ ಮೆಟ್ರೊ ರೈಲು ಸಂಚಾರ ವ್ಯತ್ಯಯಗೊಂಡಿತು.

ಟ್ರಿನಿಟಿ ನಿಲ್ದಾಣ–ಎಂ.ಜಿ. ರಸ್ತೆ ನಡುವೆ ಹಳಿಗಳ ಮೆಲೆ ಭಾನುವಾರ ರಾತ್ರಿ 7.25ರ ಹೊತ್ತಿಗೆ ಮರದ ಕೊಂಬೆ ಮುರಿದು ಬಿತ್ತು. ಇದರಿಂದ ಈ ಮಾರ್ಗದಲ್ಲಿ ಸುಮಾರು 20 ನಿಮಿಷ ಮೆಟ್ರೊ ಸಂಚಾರ ಸ್ಥಗಿತಗೊಂಡಿತು.

ಬಳಿಕ ಇಂದಿರಾನಗರ ಮೆಟ್ರೊ ನಿಲ್ದಾಣದಿಂದ ವೈಟ್‌ಫೀಲ್ಡ್‌ ಕಡೆಗೆ ಹಾಗೂ ಎಂ.ಜಿ. ರಸ್ತೆಯಿಂದ ಚಲ್ಲಘಟ್ಟ ಕಡೆಗೆ ಮೆಟ್ರೊ ಕಾರ್ಯಾಚರಣೆ ಆರಂಭವಾಯಿತು. ಇಂದಿರಾನಗರದಿಂದ ಎಂ.ಜಿ. ರಸ್ತೆವರೆಗೆ ಮೆಟ್ರೊ ರೈಲು ಇಲ್ಲದೇ ಪ್ರಯಾಣಿಕರು ಪರದಾಡುವಂತಾಯಿತು.

‘ಮರದ ಕೊಂಬೆಯನ್ನು ತೆರವುಗೊಳಿಸುವ ಕಾರ್ಯವನ್ನು ಬಿಎಂಆರ್‌ಸಿಎಲ್‌ ಸಿಬ್ಬಂದಿ ಮಾಡುತ್ತಿದ್ದಾರೆ. ತೆರವಾದ ಕೂಡಲೇ ಎಂ.ಜಿ. ರಸ್ತೆ– ಇಂದಿರಾನಗರ ನಡುವೆ ಮೆಟ್ರೊ ರೈಲು ಕಾರ್ಯಾಚರಣೆ ಆರಂಭಗೊಳ್ಳಲಿದೆ. ಪ್ರಯಾಣಿಕರಿಗಾದ ತೊಂದರೆಗೆ ಕ್ಷಮೆ ಕೇಳುತ್ತೇವೆ’ ಎಂದು ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT